ವಾಷಿಂಗ್ಟನ್: ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿನ್ನೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಅಮೆರಿಕದ 13 ಸೈನಿಕರು ಸೇರಿ ಒಟ್ಟು 73 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕೃತ್ಯ ಎಸಗಿದವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜೋ ಬೈಡೆನ್, "ಈ ದುಷ್ಕೃತ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ. ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಘಟನೆಯ ಹಿಂದಿರುವವರನ್ನು ನಾವು ಕ್ಷಮಿಸುವುದಿಲ್ಲ, ತಕ್ಕ ಪಾಠ ಕಲಿಸುತ್ತೇವೆ. ದಾಳಿಯಲ್ಲಿ ಹುತಾತ್ಮರಾದ ಅಮೆರಿಕ ಸೈನಿಕರು ವೀರರು. ದಾಳಿ ನಂತರವೂ ಸ್ಥಳಾಂತರ ಕಾರ್ಯ ಮುಂದುವರೆಯುತ್ತದೆ" ಎಂದು ಹೇಳಿದ್ದಾರೆ.
"ನೀವು ಎಲ್ಲಿದ್ದರೂ ಬಿಡುವುದಿಲ್ಲ. ಹುಡುಕಿ ಹೊಡೆಯುತ್ತೇವೆ. ಈ ಕೃತ್ಯಕ್ಕೆ ಬೆಲೆ ಕಟ್ಟುವಂತೆ ಮಾಡುತ್ತೇವೆ. ಈವರೆಗೆ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ಸ್ ಕೈ ಜೋಡಿಸಿ ಈ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ" ಎಂದು ಜೋ ಬೈಡನ್ ಎಚ್ಚರಿಕೆ ಕೊಟ್ಟಿದ್ದಾರೆ.
PublicNext
27/08/2021 07:40 am