ಕಾಬೂಲ್: ತಾಲಿಬಾನ್ ವಶಕ್ಕೆ ಸೇರುತ್ತಿದ್ದಂತೆ ಅಫ್ಘಾನಿಸ್ತಾನ್‌ನಲ್ಲಿ ಕ್ರೌರ್ಯ ತುಂಬಿದ್ದು, ಅಶಾಂತಿ ತಾಂಡವಾಡುತ್ತಿದೆ. ಅದರಲ್ಲೂ ಕಾಬೂಲ್‌ನಲ್ಲಿ ಅನ್ನ, ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಆಫ್ಘಾನ್ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ಸಾವಿರಾರು ಜನರು ಕಾಬೂಲ್ ಏರ್ಪೋರ್ಟ್ನಲ್ಲಿ ತುಂಬಿಕೊಂಡಿದ್ದಾರೆ. ಸುಮಾರು 10 ಲಕ್ಷ ಮಂದಿ ದೇಶ ತೊರೆಯಲು ಬಯಸಿದ್ದಾರೆ. ಆದರೆ ಇಲ್ಲಿಯವರೆಗೂ 82,300 ಮಂದಿಯನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಅದರಲ್ಲಿ ಅನೇಕ ಮಂದಿ ವಿದೇಶಿಗರೆ ಆಗಿದ್ದಾರೆ. ಉಳಿದ ಆಫ್ಘಾನ್ನ ಸಾಮಾನ್ಯ ಜನರು ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕುಳಿತಿದ್ದಾರೆ. ಹೀಗಾಗಿ ಒಂದು ಬಾಟಲ್ ನೀರಿನ ಬೆಲೆ 40 ಡಾಲರ್ (ಅಂದಾಜು 3000 ರೂ.), ಇನ್ನು ಒಂದು ಪ್ಲೇಟ್ ಊಟಕ್ಕೆ 100 ಡಾಲರ್ (7 ಸಾವಿರ ರೂ.) ಆಗಿದೆ. ಯಾರ ಹತ್ತಿರ ಡಾಲರ್ ಇದೆಯೋ ಅವರು ಮಾತ್ರ ನೀರು ಮತ್ತು ಆಹಾರವನ್ನು ಕೊಳ್ಳುತ್ತಿದ್ದು, ನಿಜಕ್ಕೂ ಪರಿಸ್ಥಿತಿ ಹೇಳತೀರದ್ದಾಗಿದೆ.
PublicNext
26/08/2021 03:45 pm