ನವದೆಹಲಿ: ದಲ್ವೀರ್ ಭಂಡಾರಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಅಮೆರಿಕ ಹಾಗೂ ದೆಹಲಿಯಲ್ಲಿರುವ ದಲ್ವೀರ್ ಭಂಡಾರಿ ಅವರ ಕುಟುಂಬಸ್ಥರಿಗೆ ನೂರಾರು ಜನರು ಅಭಿನಂದನೆ ಸಲ್ಲಿಸಿದ್ದಾರೆ.
ಈ ವೈರಲ್ ಸುದ್ದಿ ನಕಲಿಯಾಗಿದೆ. ಐಸಿಜೆ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮಂಗಳವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದರು. ಆದರೆ ಮಂಗಳವಾರ ಬೆಳಿಗ್ಗೆ, "ನ್ಯಾಯಮೂರ್ತಿ ದಲ್ವೀರ್ ಭಂಡಾರಿ (ಜೋಧ್‌ಪುರ್) ಮುಂದಿನ ಒಂಬತ್ತು ವರ್ಷಗಳ ಕಾಲ ಅಂತರರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಅವರು 193ರಲ್ಲಿ 183 ಮತಗಳನ್ನು ಪಡೆದಿದ್ದಾರೆ. ಗ್ರೇಟ್ ಬ್ರಿಟನ್ ಕಳೆದ 71 ವರ್ಷಗಳಿಂದ ಇಂತಹ ಮಹತ್ವದ ಹುದ್ದೆ ಹೊಂದಿತ್ತು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ'' ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನ್ಯಾಯಮೂರ್ತಿ ಭಂಡಾರಿ ಮೊದಲ ಬಾರಿಗೆ ಐಸಿಜೆಯ ನ್ಯಾಯಾಧೀಶರಾಗಿ 2012ರ ಏಪ್ರಿಲ್ 27ರಂದು ಆಯ್ಕೆಯಾಗಿದ್ದರು. ಅವರು ಎರಡನೇ ಬಾರಿಗೆ ನವೆಂಬರ್ 2017ರಲ್ಲಿ ಆಯ್ಕೆಯಾಗಿದ್ದು, 2026ರವರೆಗೆ ಐಸಿಜೆಯ ನ್ಯಾಯಾಧೀಶರಾಗಿ ಮುಂದುವರಿಯುತ್ತಾರೆ.
ಭಂಡಾರಿ ಮತ್ತು ಬ್ರಿಟನ್‌ನ ಕ್ರಿಸ್ಟೋಫರ್ ಗ್ರೀನ್‌ವುಡ್ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಸಾಮಾನ್ಯ ಸಭೆಯಲ್ಲಿ ಒಟ್ಟು 193 ಸದಸ್ಯರ ಪೈಕಿ 183 ಸದಸ್ಯರ ಮತಗಳನ್ನು ನ್ಯಾಯಮೂರ್ತಿ ಭಂಡಾರಿ ಪಡೆದಿದ್ದರು. ವಾಸ್ತವವಾಗಿ ಈ ಪೋಸ್ಟ್ 2017ರಿಂದ, ಅವರು ಮರು ಆಯ್ಕೆಯಾಗಿದ್ದಾಗಿದೆ. ಅದು ಈಗ ವೈರಲ್ ಆಗುತ್ತಿದೆ. ಆದಾಗ್ಯೂ ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ 'ಮುಖ್ಯ ನ್ಯಾಯಾಧೀಶರು' ಎಂಬುದು ಸಂಪೂರ್ಣವಾಗಿ ಆಧಾರರಹಿತವಾಗಿದೆ.
PublicNext
26/08/2021 09:35 am