ಸಾದತ್ ಅವರು ಇದೀಗ ಜರ್ಮನಿಯಲ್ಲಿ ಆಹಾರ ವಿತರಿಸುವ ಕೆಲಸಗಾರರಾಗಿ ಕೆಲಸ ನಿರ್ವಿಸುತ್ತಿದ್ದಾರೆ. ಜರ್ಮನಿಯ ಲೀಪ್ ಜಿಗ್ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕೇವಲ ಒಂದು ವರ್ಷದ ಹಿಂದೆ ಸಯ್ಯದ್ ಅಹ್ಮದ್ ಶಾ ಸಾದತ್ ಅಫ್ಘಾನಿಸ್ತಾನದಲ್ಲಿ ಸಂವಹನ ಮತ್ತು ಐಟಿ ಸಚಿವರಾಗಿದ್ದರು. ಬಳಿಕ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ 2020ರಲ್ಲಿ ತಮ್ಮ ದೇಶವನ್ನು ತೊರೆದು ಜರ್ಮಿನಿಗೆ ಹೋಗಿ ನೆಲೆಸಿದರು.
ಸದ್ಯ ಜರ್ಮನಿಯ ಲೀಪ್ ಜಿಗ್ ನಗರದಲ್ಲಿ ಇವರು ಆಹಾರ ವಿತರಿಸುವ ಕೆಲಸಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಾದತ್ ತಾಲಿಬಾನ್ ಸ್ವಾಧೀನಕ್ಕೂ ಮುಂಚೆಯೇ 2020ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಸ್ತುತದಲ್ಲಿ ನಾನು ಸರಳವಾದ ಜೀವನವನ್ನು ನಡೆಸುತ್ತಿದ್ದೇನೆ. ನನ್ನ ಜೀವನ ಜರ್ಮನಿಯಲ್ಲಿ ಸುರಕ್ಷಿತವಾಗಿದೆ. ಲೀಪ್ ಜಿಗ್ ನಲ್ಲಿ ನನ್ನ ಕುಟುಂಬದೊಂದಿಗೆ ಇರುವುದು ನನಗೆ ಸಂತೋಷ ತಂದಿದೆ.
ಜರ್ಮನ್ ನ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು ಎಂದು ಸಾದತ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಲು ಸಾದತ್ ನಿರಾಕರಿಸಿದ್ದಾರೆ. ಆದರೆ, ಅಶ್ರಫ್ ಘನಿ ಸರ್ಕಾರ ಇಷ್ಟು ಬೇಗ ಬೀಳುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
PublicNext
25/08/2021 10:40 pm