ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾನಿಬಾನಿಗಳ ಅಟ್ಟಹಾಸಕ್ಕೆ ಬೇಸತ್ತ ಜನರು ವಿದೇಶಗಳಿಗೆ ಹಾರುತ್ತಿದ್ದಾರೆ. ಪರಿಣಾಮ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಅಮೆರಿಕ ಸೇನೆ ಪರದಾಡುತ್ತಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳು ತಮ್ಮ ತಮ್ಮ ದೇಶಗಳ ನಾಗರಿಕರನ್ನು ಏರ್ ಲಿಫ್ಟ್ ಮಾಡುತ್ತಿವೆ.
ಸಾವು ನೋವುಗಳ ಸುದ್ದಿಗಳನ್ನೇ ಕೇಳುತ್ತಿರುವ ಹೊತ್ತಲ್ಲಿ ಅಫ್ಘಾನಿಸ್ತಾನದಿಂದ ಏರ್ ಲಿಫ್ಟಿಂಗ್ ವೇಳೆ ವಿಮಾನದಲ್ಲೇ ಮಗುವಿಗೆ ತಾಯಿ ಜನ್ಮ ನೀಡಿದ್ದಾರಂತೆ. ಅಮೆರಿಕ ಸೇನೆ ವಿಮಾನದಲ್ಲೇ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕಾ ಸೇನೆ, ಜರ್ಮನಿಗೆ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಅಫ್ಘಾಸ್ತಾನದ ಮಹಿಳೆಗೆ ಹೆರಿಗೆಯಾಗಿದೆ. ಕಾಬೂಲ್ ಏರ್ಪೋರ್ಟ್ನಿಂದ ಜರ್ಮನಿಗೆ ತೆರೆಳಿದ್ದ ವಿಮಾನದಲ್ಲಿ ಈ ಹೆರಿಗೆ ಆಗಿದೆ ಎಂದು ತಿಳಿಸಿದ್ದಾರೆ.
PublicNext
22/08/2021 10:07 pm