ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

107 ಭಾರತೀಯರು ಸೇರಿ ಒಟ್ಟು 168 ಜನ ಭಾರತಕ್ಕೆ: ನಿಟ್ಟುಸಿರು ಬಿಟ್ಟ ಕುಟುಂಬಸ್ಥರು

ನವದೆಹಲಿ: ಕಾರುಣ್ಯವಿಲ್ಲದ ತಾಲಿಬಾನ್ ಕಿರಾತಕರ ಅಟ್ಟಹಾಸ ಅಪ್ಘಾನಿಸ್ತಾನದಲ್ಲಿ ತಾರಕಕ್ಕೆ ಏರಿದೆ. 107 ಭಾರತೀಯರು ಸೇರಿ ಒಟ್ಟು 168 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತರಲಾಗಿದೆ. ಭಾರತೀಯ ಸೇನೆಯ ವಿಮಾನದ ಮೂಲಕ ಕಾಬೂಲ್‍ನಿಂದ ಹಿಂಡನ್ ಏರ್ ಫೋರ್ಸ್ ಬೇಸ್‍ನ ಗಾಜಿಯಾಬಾದ್‍ಗೆ ಕರೆತರಲಾಗಿದೆ.

ಭಾರತೀಯ ವಾಯು ಸೇನೆಯ ಸಿ-17 ವಿಮಾನದ ಮೂಲಕ ಕಾಬೂಲ್‍ನಿಂದ ಇಂದು ಬೆಳಗ್ಗೆ 107 ಜನ ಭಾರತೀಯರು ಸೇರಿ ಒಟ್ಟು 168 ಜನ ಭಾರತಕ್ಕೆ ಬಂದಿಳಿದಿದ್ದಾರೆ. ವಿದೇಶಾಂಗ ಸಚಿವಾಲಯದ ಅರಿಂದಮ್ ಬಾಗ್ಚಿ ಅವರು ಈ ಕುರಿತು ಟ್ವೀಟ್ ಮೂಲಕ ಖಚಿತ ಮಾಹಿತಿ ನೀಡಿದ್ದಾರೆ. ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಇದರಲ್ಲಿ ಮೂವರು ಕನ್ನಡಿಗರು ಇದ್ದಾರೆಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

22/08/2021 02:25 pm

Cinque Terre

84.89 K

Cinque Terre

6

ಸಂಬಂಧಿತ ಸುದ್ದಿ