ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ 150 ಭಾರತೀಯರು ಸುರಕ್ಷಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತದ 150 ಮಂದಿಯನ್ನು ತಾಲಿಬಾನ್ ಉಗ್ರರು ಅಪಹರಣ ಮಾಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಭಾರತೀಯರ ಪಾಸ್ಪೋರ್ಟ್ ಪರಿಶೀಲಿಸಿದ ತಾಲಿಬಾನಿಗಳು ಕಾಬೂಲ್ ಏರ್ಪೋರ್ಟ್ ಬಳಿ ವಾಪಸ್ ಬಿಡುವ ಭರವಸೆ ನೀಡಿದ್ದರು. ಸದ್ಯ ಅವರೆಲ್ಲರೂ ಸುರಕ್ಷಿತವಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದ ಬಳಿ ಇರುವ ಗ್ಯಾರೇಜ್ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
PublicNext
21/08/2021 04:53 pm