ನ್ಯೂಯಾರ್ಕ್: ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಫ್ಘಾನ್‌ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದಿದ್ದರು. ಅವರಿಗೆ ಯುಎಇನಲ್ಲಿ ಆಶ್ರಯ ನೀಡಿದೆ. ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದಿಂದ ಓಡಿ ಹೋಗಿದ್ದ ಅಶ್ರಫ್ ಘನಿ ಪುತ್ರಿ ಮರಿಯಮ್ ಘನಿ ನ್ಯೂಯಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮರಿಯಮ್ ಅವರು ತಮ್ಮ ಸ್ನೇಹಿತೆಯೊಬ್ಬರೊಂದಿಗೆ ಬ್ರೂಕ್ಲಿನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವಿಶುವಲ್ ಕಲಾವಿದೆ ಹಾಗೂ ಫಿಲಂ ಮೇಕರ್ ಆಗಿರುವ ಮರಿಯಮ್ ಕ್ಲಿಂಟನ್ ಹಿಲ್‌ನಲ್ಲಿ ಐಷಾರಾಮಿ ಕಟ್ಟಡವೊಂದರಲ್ಲಿ ವಾಸಿಸುತ್ತಾರೆ. ಮರಿಯಮ್ ಮಾಸ್ಕ್ ಧರಿಸಿಕೊಂಡು ತಮ್ಮ ಸ್ನೇಹಿತೆಯೊಂದಿಗೆ ಹರಟುತ್ತಾ ಇಲ್ಲಿನ ರಸ್ತೆಬದಿಯೊಂದಲ್ಲಿ ಹಾಗೇ ಅಡ್ಡಾಡುತ್ತಿದ್ದರು ಎನ್ನಲಾಗಿದೆ.
PublicNext
21/08/2021 04:11 pm