ಅಫ್ಘಾನಿಸ್ತಾನ್ ವನ್ನು ತಾಲಿಬಾನ್ ವಶಪಡಿಸಿಕೊಂಡ ಮೇಲೆ ಉಗ್ರರ ಅಟ್ಟಹಾಸ ಹೆಚ್ಚಾಗಿದೆ. ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿರುವ ಅಫ್ಘಾನ್ ಅಕ್ಷರಸಹ ನಲುಗಿ ಹೋಗುತ್ತಿದೆ. ಇದರ ಸಾಕಷ್ಟು ವಿಡಿಯೋ ತುಣುಕುಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿವೆ ಸದ್ಯ ಮೇಜರ್ ಗೌರವ್ ಆರ್ಯ ಎಂಬುವವರು ಉಗ್ರರ ತಂಡದ ಫೋಟೋವೊಂದನ್ನು ಪಾಕಿಸ್ತಾನ್ ಆರ್ಮಿಗೆ ಟ್ಯಾಗ್ ಮಾಡಿ ಫೋಸ್ಟ್ ಮಾಡಿದ್ದಾರೆ.
ತಾಲಿಬಾನಿಗಳು ಸಾಮಾನ್ಯ ಸೈನ್ಯದಿಂದ ತರಬೇತಿ ಪಡೆದಿದ್ದಾರೋ.? ಅಥವಾ ಸಾಮಾನ್ಯ ಸೈನ್ಯರೇ ತಾಲಿಬಾನಿಗಳಂತೆ ವೇಷ ತೊಟ್ಟು ನಿಂತಿದ್ದಾರೋ ಎಂದು ಮೇಜರ್ ಗೌರವ್ ಆರ್ಯ ಅವರು ಫೋಟೋ ಅಡಿಯಲ್ಲಿ ಬರೆದಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ಪಾಕಿಸ್ತಾನದ ವಕ್ತಾರರಿಗೆ ಟ್ಯಾಗ್ ಮಾಡಿ "ನೀವು ತುಂಬ ತುಂಟರು" ಎಂದು ಬರೆದಿದ್ದಾರೆ.
ಈ ಟ್ವೀಟ್ ಸದ್ಯ ಭಾರಿ ವೈರಲ್ ಆಗುತ್ತಿದೆ.
PublicNext
21/08/2021 03:56 pm