ಅಫ್ಘಾನಿಸ್ತಾನ ತಾಲಿಬಾನ್ ಉಗ್ರರರ ಕಪಿಮುಷ್ಠಿಯಲ್ಲಿ ನಲಗುತ್ತಿದೆ. ಸದ್ಯ ಯುಎಇಗೆ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಹೋದರ ಹಷ್ಮತ್ ಘನಿ ಇದೀಗ ಸುದ್ದಿಯಲ್ಲಿದ್ದಾರೆ. ‘ತಾವು ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುವುದಾಗಿ ಹಷ್ಮತ್ ಘನಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೂಚಿಗಳ ಮಹಾಮಂಡಳಿ ಮುಖ್ಯಸ್ಥನಾಗಿರುವ ಹಷ್ಮತ್ ಘನಿ ಅಹ್ಮದ್ ಜೈ, ತಾವು ತಾಲಿಬಾನ್ ಆಡಳಿತಕ್ಕೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತೇವೆ ಎಂದು ತಾಲಿಬಾನ್ ನಾಯಕ ಖಲೀಲ್ ಉರ್ ರೆಹ್ಮಾನ್ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮೂದ್ ಜಾಕಿರ್ ಸಮ್ಮುಖದಲ್ಲಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಹೀಗೊಂದು ವಿಡಿಯೋವನ್ನು ಇಸ್ಲಮಾಬಾದ್ನ ಪತ್ರಕರ್ತರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ದೇಶದಿಂದ ಪಲಾಯನಗೈದ ಬಳಿಕ ಅಶ್ರಫ್ ಘನಿ ಒಂದು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿ ನಂತರ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಹೋಗಿ ಸೇರಿದ್ದಾರೆ. ಅದಾದ ಬಳಿಕ ಫೇಸ್ಬುಕ್ ವಿಡಿಯೋ ಮಾಡಿ ಹರಿಬಿಟ್ಟ ಅವರು, ನಾನು ಅಫ್ಘಾನಿಸ್ತಾನದಲ್ಲಿ ರಕ್ತಪಾತ ತಪ್ಪಿಸುವ ಸಲುವಾಗಿ ಅಲ್ಲಿಂದ ಹೊರಡುವ ನಿರ್ಧಾರ ಮಾಡಿದೆ. ನನ್ನನ್ನು ಹೊರಹಾಕಲಾಗಿದೆಯೇ ಹೊರತು, ನಾನು ಪರಾರಿಯಾಗಿದ್ದಲ್ಲ ಎಂದು ಹೇಳಿಕೊಂಡಿದ್ದರು.
PublicNext
21/08/2021 12:34 pm