ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಲಿಬಾನ್ ಉಗ್ರರನ್ನು ಸದೆಬಡಿದು 3 ಜಿಲ್ಲೆ ವಶಪಡಿಸಿಕೊಂಡ ಅಫ್ಘಾನ್ ರು

ಕಾಬೂಲ್ : ತಾಲಿಬಾನ್ ಉಗ್ರರರ ಕೈಯಲ್ಲಿ ಅಫ್ಘಾನ್ ಅಕ್ಷರಸಹ ನಲಗುತ್ತಿದೆ. ಅಫ್ಘಾನ್ ನೆಲದಲ್ಲಿ ನರಮೇಧ ನಡೆಯುತ್ತಿದೆ. ಉಗ್ರರ ಉಪಟಳಕ್ಕೆ ಅಫ್ಘನ್ ರು ದೇಶ ತೊರೆಯುತ್ತಿದ್ದಾರೆ. ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸೇನೆಯ ನಡುವೆ ಹಾವು ಏಣಿ ಆಟ ಮುಂದುವರೆದಿದೆ. ತಾಲಿಬಾನ್ ಭಯೋತ್ಪಾದಕರಿಂದ ಮೂರೂ ಜಿಲ್ಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಆಫ್ಘನ್ ಪಡೆ ಹೇಳಿಕೊಂಡಿದೆ.

ಉತ್ತರ ಬಘ್ಲಾನ್ ಪ್ರಾಂತ್ಯದ ಪೊಲ್-ಇ- ಹೆಸಾರ್ ಜಿಲ್ಲೆಯನ್ನು ಆಫ್ಘನ್ ಪಡೆಗಳು ತಾಲಿಬಾನಿಗಳಿಂದ ವಶಕ್ಕೆ ಪಡೆದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಜೊತೆಗೆ ದೆಹ್ ಸಲಾಹ್ ಮತ್ತು ಖ್ವಸಾನ್ ಜಿಲ್ಲೆಗಳನ್ನೂ ಆಫ್ಘನ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮುಹಮ್ಮದಿ ತಾಲಿಬಾನ್ ಉಗ್ರರನ್ನು ಹತ್ತಿಕ್ಕುವುದು ನಮ್ಮ ಕರ್ತವ್ಯ, ತಾಲಿಬಾನ್ ನಿಂದ ಪೊಲ್-ಇ-ಹೆಸಾರ್, ದೆಹ್ ಸಲಾಹ್, ಬೆನೋ ಜಿಲ್ಲೆಗಳನ್ನು ಆಫ್ಘನ್ ಪಡೆಗಳು ವಶಕ್ಕೆ ಪಡೆದಿವೆ' ಎಂದು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

21/08/2021 08:03 am

Cinque Terre

54.99 K

Cinque Terre

10

ಸಂಬಂಧಿತ ಸುದ್ದಿ