ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮಗೆ ಗೊತ್ತೇ.. ತಾಲಿಬಾನ್ ಮುಖ್ಯಸ್ಥ ತರಬೇತಿ ಪಡೆದಿದ್ದು ಭಾರತೀಯ ಸೇನೆಯಲ್ಲಿ…!

ನವದೆಹಲಿ : ಅಫ್ಘಾನ್ ನಲ್ಲಿ ದರ್ಬಾರ್ ನಡೆಸುತ್ತಿರುವ ತಾಲಿಬಾನ್ ಉಗ್ರರರ ರಾಜಕೀಯ ಘಟಕದ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಾಜಿ ಭಾರತೀಯ ಸೇನೆಯಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸಿದ್ದರು ಎಂಬ ಅಂಶ ಬಹಿರಂಗವಾಗಿದೆ. ಭಾರತೀಯ ಸೇನೆಯಲ್ಲಿ ಅವರು ಕೆಲಸ ಮಾಡುವಾಗ ಸಹೋದ್ಯೋಗಿಗಳು ಅಬ್ಬಾಸ್ ಅವರನ್ನು ಶೇರು ಎಂದು ಕರೆಯುತ್ತಿದ್ದರು.

ಭಾರತೀಯ ಸೇನೆ ಆಫ್ಘಾನಿಸ್ತಾನದವರಿಗಾಗಿ ಬಾಗಿಲುಗಳನ್ನು ತೆರೆದಿಟ್ಟಾಗ 1982ರಲ್ಲಿ ಶೇರು ಸೇರ್ಪಡೆಯಾಗಿದ್ದರು. ಡೆಹರಾಡೂನ್ ನ ತರಬೇತಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಾಲ ತರಬೇತಿ ಪಡೆದಿದ್ದರು. ಆಗ ಅವರಿಗೆ 20 ವರ್ಷ ವಯಸ್ಸಾಗಿತ್ತು. ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ನಿವೃತ್ತರಾದರು. ಆ ಸಂದರ್ಭದಲ್ಲಿ ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದರು.

ಇತರರಿಗಿಂತಲೂ ಹಿರಿಯರಾಗಿದ್ದರು. ಈಜು ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದರು. ಆ ವೇಳೆ ಅವರಲ್ಲಿ ತೀವ್ರವಾದದ ಯಾವ ಮನಸ್ಥಿತಿಗಳು ಇರಲಿಲ್ಲ ಎಂದು ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಡಿ.ಎ.ಚತುರ್ವೇದಿ ಹೇಳಿದ್ದಾರೆ.

ಭಾರತೀಯ ಸೇನೆ ಸೇರಿದ ಬಳಿಕ ಶೇರು ಆಫ್ಘಾನ್ ರಾಷ್ಟ್ರೀಯ ಸೇನೆಯ ಲೆಫ್ಟಿನೆಂಟ್ ಆಗಿ ಸೇರಿಕೊಂಡಿದ್ದರು. ಸೋವಿಯತ್ ಆಫ್ಘನ್ ಮಹಾಯುದ್ಧ, ಇಸ್ಲಾಮಿಕ್ ಲಿಬರೇಷನ್ ಆಫ್ ಆಫ್ಘಾನಿಸ್ತಾನ್ ಯುದ್ಧಗಳಲ್ಲಿ ಹೋರಾಟ ಮಾಡಿದ್ದರು. ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಉಪಮಂತ್ರಿಯಾಗಿ ಕೆಲಸ ಮಾಡಿದ್ದರು. ಬಿಲ್ ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಅಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದರು.

ತಾಲಿಬಾನ್ ನ ಮುಖ್ಯಸ್ಥರಾಗಿ ನೇಮಕವಾದ ನಂತರ ಉಗ್ರವಾದವನ್ನು ಅಳವಡಿಸಿಕೊಂಡು ಈಗ ಬಂಡುಕೋರರ ಗುಂಪಿನ ನಾಯಕರಾಗಿದ್ದಾರೆ.

Edited By : Nirmala Aralikatti
PublicNext

PublicNext

20/08/2021 05:09 pm

Cinque Terre

87.93 K

Cinque Terre

16

ಸಂಬಂಧಿತ ಸುದ್ದಿ