ಕಾಬೂಲ್ : ತಾನಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಅಫ್ಘಾನ್ ಪ್ರಧಾನಿ ಅಶ್ರಫ್ ಘನಿʼ ಕುಟುಂಬಕ್ಕೆ ಮಾನವೀಯ ಆಧಾರದ ಮೇಲೆ ಆಶ್ರಯ ನೀಡಿದ್ದೇವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪ್ಪಿಕೊಂಡಿದೆ.
'ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ಆಧಾರದ ಮೇಲೆ ದೇಶಕ್ಕೆ ಸ್ವಾಗತಿಸಿದೆ' ಎಂದು ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯವು ದೃಢಪಡಿಸಿದೆ. ಘನಿ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿಯಲ್ಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕಾಬೂಲ್ ನ್ಯೂಸ್ ವರದಿ ಮಾಡಿದೆ.
PublicNext
18/08/2021 08:31 pm