ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್ ನಲ್ಲಿ ಮಹಿಳೆ ಮಕ್ಕಳ ಆಕ್ರಂದನ : ಶಾಂತಿಯ ಭರವಸೆ ನೀಡಿದ್ದ ಉಗ್ರರಿಂದ ಮಾರಕ ದಾಳಿ

ಕಾಬೂಲ್ : ತಾಲಿಬಾನ್ ಆಕ್ರಮಿತ ಆಫ್ಘಾನಿಸ್ತಾನದಲ್ಲಿ ದೇಶ ಬಿಟ್ಟು ಪಲಾಯನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭಾನುವಾರದಿಂದ ಆರಂಭವಾದ ಈ ಬೆಳವಣಿಗೆ ಇಂದಿಗೂ ಕಡಿಮೆಯಾಗಿಲ್ಲ. ಅಫ್ಘನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಮತ್ತು ಶಾಂತಿ ಕಾಪಾಡುವುದಾಗಿ ಭರವಸೆ ನೀಡಿತ್ತು. ಆದರೆ, ದೇಶಾದ್ಯಂತ ಹಿಂಸಾಚಾರದ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ಇದು ತಾಲಿಬಾನ್ ತನ್ನ ಹಿಂಸಾಚಾರವನ್ನು ಮುಂದುವರೆಸುತ್ತಿದೆ.

ಮೊದಲ ದಿನ ಪುರುಷರು ಮಾತ್ರ ಓಡೋಡಿ ಬಂದಿದ್ದರು. ಕಳೆದೆರಡು ದಿನಗಳಿಂದ ಮಹಿಳೆಯರು ಮಕ್ಕಳು ಕೂಡ ವಿದೇಶಗಳಿಗೆ ತೆರಳಲು ಆಗಮಿಸಿದ್ದಾರೆ. ದೇಶವನ್ನು ತೊರೆಯಲು ಮತ್ತು ದಂಗೆಕೋರರ ಅಡಿಯಲ್ಲಿ ಊಹಿಸಲಾದ ಕಠಿಣ ಇಸ್ಲಾಮಿಕ್ ಆಡಳಿತದಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳನ್ನು ಹೊಡೆಯಲು ತಾಲಿಬಾನ್ ಚಾವಟಿಗಳು, ಕೋಲುಗಳಂತಹ ತೀಕ್ಷ್ಣವಾದ ವಸ್ತುಗಳನ್ನು ಬಳಸುತ್ತಿದೆ ಎಂದು ತಿಳಿದುಬಂದಿದೆ.

ಈ ದೃಶ್ಯಗಳನ್ನು ಲಾಸ್ ಏಂಜಲೀಸ್ ಟೈಮ್ಸ್ ವರದಿಗಾರ ಮಾರ್ಕಸ್ ಯಾಮ್ ಅವರು ಇಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 'ಒಬ್ಬ ಮಹಿಳೆ ಮತ್ತು ಅವಳ ಮಗು ಸೇರಿದಂತೆ ಹಲವರು ಅಲ್ಲಿದ್ದಾಗ ತಾಲಿಬಾನ್ ನಡೆಸಿದ ದಾಳಿಗೆ ಕನಿಷ್ಠ ಅರ್ಧ ಡಜನ್ ಜನರು ಗಾಯಗೊಂಡರು' ಎಂದು ಅವರು ಹೇಳಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

18/08/2021 06:06 pm

Cinque Terre

43.04 K

Cinque Terre

13

ಸಂಬಂಧಿತ ಸುದ್ದಿ