ನವದೆಹಲಿ: ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಭಾರತದ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ. ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ವಾನಗಳನ್ನೂ ದೇಶಕ್ಕೆ ಕರೆತರಲಾಗಿದೆ.
ಸ್ನೈಫರ್ ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ. ಜೊತೆಗೆ ಐಟಿಬಿಪಿಯ 99 ಕಮಾಂಡೋಗಳು, ರಾಯಭಾರಿ ಕಚೇರಿಯ 30 ಜನ ಅಧಿಕಾರಿಗಳು ಮತ್ತು 21 ನಾಗರಿಕರನ್ನು ಕಾಬೂಲ್‌ನಿಂದ ಏರ್ ಲಿಫ್ಟ್ ಮಾಡಲಾಗಿದೆ. ಭಾರತೀಯ ವಾಯುಸೇನೆಯ (ಐಎಎಫ್) ಸಿ-17 ವಿಶೇಷ ವಿಮಾನ ನಿನ್ನೆ ಬೆಳಿಗ್ಗೆ 11:20ಕ್ಕೆ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿತ್ತು.
PublicNext
18/08/2021 03:34 pm