ಕಾಬೂಲ್ : ಅಫ್ಘಾನ್ ನ ಪ್ರಥಮ ಮಹಿಳಾ ಗವರ್ನರ್ ಸಲೀಮಾ ಮಜಾರಿ ಸದ್ಯ ಬಂದೂಕುಧಾರಿಗಳ ಕೈವಶವಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧವೇ ಸಡ್ಡು ಹೊಡೆದಿದ್ದ ಇವರು ಸದ್ಯ ಉಗ್ರರರ ಕಪಿಮುಷ್ಠಿಯಲ್ಲಿದ್ದಾರೆ. ಸಲೀಮಾ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.
ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆಯೇ ಹಲವು ರಾಜಕೀಯ ಮುಖಂಡರು ದೇಶ ಬಿಟ್ಟು ಪಲಾಯನವಾಗಿದ್ದರು. ಆದರೆ ಗವರ್ನರ್ ಸಲೀಮಾ ಅವರನ್ನು ಬಾಲ್ಕ್ ಪ್ರಾಂತ್ಯದಲ್ಲಿ ಸೆರೆ ಹಿಡಿಯಲಾಯಿತು ಎಂದು ವರದಿ ವಿವರಿಸಿದೆ. ವರದಿಯ ಪ್ರಕಾರ, ತಾಲಿಬಾನ್ ಬಂಡುಕೋರರು ಇಡೀ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದ ನಂತರ ಗವರ್ನರ್ ಸಲೀಮಾ ಮಜಾರಿಯನ್ನು ಬಂಧಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಸಲೀಮಾ ಮಜಾರಿ ಅಫ್ಘಾನಿಸ್ತಾನ ಕಂಡ ಮೂವರು ಮಹಿಳಾ ರಾಜ್ಯಪಾಲರಲ್ಲಿ ಒಬ್ಬರಾಗಿದ್ದಾರೆ. ತಾಲಿಬಾನಿಗಳಿಂದ ಬಾಲ್ಕ ಪ್ರಾಂತ್ಯದ ಚಹಾರ್ ಕಿಂಟ್ ನಲ್ಲಿ ಯಾವುದೇ ಸಾವು ನೋವು ಸಂಭವಿಸದಂತೆ ಉಳಿಸಿಕೊಳ್ಳಲು ಸಲೀಮಾ ಪ್ರಯತ್ನಿಸಿದ್ದರು. ಮಜಾರಿಯ ಹಲವು ಭಾಗ ತಾಲಿಬಾನ್ ಹಿಡಿತದಲ್ಲಿದ್ದು, ಇನ್ನುಳಿದ ಪ್ರದೇಶವನ್ನು ತಾಲಿಬಾನ್ ವಶಕ್ಕೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಲೀಮಾ ತಾಲಿಬಾನ್ ವಿರುದ್ಧ ಹೋರಾಡಲು ಜನರನ್ನು ನೇಮಕ ಮಾಡಿಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದರು.
PublicNext
18/08/2021 01:57 pm