ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

129 ಜನ ಒಳಗೊಂಡ ಏರ್ ಇಂಡಿಯಾ ವಿಮಾನ ಕಾಬೂಲ್ ನಿಂದ ದೆಹಲಿಗೆ

ಕಾಬೂಲ್ : 129 ಪ್ರಯಾಣಿಕರನ್ನು AI-244 ಏರ್ ಇಂಡಿಯಾದ ವಿಮಾನವು ಭಾನುವಾರ ಕಲಹ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಕರೆದುಕೊಂಡು ದೆಹಲಿಗೆ ಬಂದಿದೆ. ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಬಿಗಿ ಹಿಡಿತ ಸಾಧಿಸಿದ್ದು, ಕಾಬೂಲ್ ನಗರದ ಹೊರವಲಯವನ್ನು ಪ್ರವೇಶಿಸಿದ್ದಾರೆ.

ಈ ಮಧ್ಯೆ, ಹಿರಿಯ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಅಫ್ಗಾನಿಸ್ತಾನದ ಸರ್ಕಾರಿ ನಿಯೋಗವು ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಲು ಕತಾರ್ ಗೆ ತೆರಳಿದೆ ಎಂದು ಆಫ್ಗನ್ ಸಂಧಾನಕಾರರು ತಿಳಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರವನ್ನು ಬಯಸುತ್ತಿದ್ದೇವೆ ಎಂದು ತಾಲಿಬಾನ್ ವಕ್ತಾರರು ಹೇಳಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಿಳೆಯರಿಗೂ ಶಿಕ್ಷಣ, ಉದ್ಯೋಗದಲ್ಲಿ ಆದ್ಯತೆ ನೀಡಲಿದ್ದೇವೆ. ಆದರೆ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು. ಮರಣದಂಡನೆ, ಕಲ್ಲುತೂರಾಟ, ಅಂಗಚ್ಛೇದನದಂತಹ ಶಿಕ್ಷೆಗಳನ್ನು ನೀಡುವ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಲಿವೆ ಎಂದೂ ವಕ್ತಾರರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

Edited By : Nirmala Aralikatti
PublicNext

PublicNext

15/08/2021 08:54 pm

Cinque Terre

52.37 K

Cinque Terre

1

ಸಂಬಂಧಿತ ಸುದ್ದಿ