ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

21 ಗ್ರಾಮಿ ಅವಾರ್ಡ್ ವಿಜೇತ ಕಿಮ್ ಕರ್ದಾಶಿಯನ್ ಬದುಕಿನಲ್ಲಿ ಬಿರುಗಾಳಿ : 3ನೇ ಪತ್ನಿಗೆ ವಿಚ್ಛೇದನ

ಲಾಸ್ ಏಂಜಲೀಸ್: ಅಮೆರಿಕದ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಪತಿ ಕಾನ್ಯೆ ವೆಸ್ಟ್ ಗೆ ವಿವಾಹ ವಿಚ್ಛೇದನ ನೀಡಲಿದ್ದಾರೆ.

ಕರ್ದಾಶಿಯನ್ 3 ನೇ ಪತ್ನಿ ಕಾನ್ಯೆ ವೆಸ್ಟ್ ಜತೆಗಿನ ಏಳು ವರ್ಷದ ದಾಂಪತ್ಯದಿಂದ ಹೊರಬಂದಿರುವ ಕಿಮ್ ಕೆಲವು ದಿನಗಳಿಂದ ಪ್ರತ್ಯೇಕ ವಾಸ ಮಾಡುತ್ತಿದ್ದರು ಎಂದು ವಾರಗಳ ಹಿಂದೆ ಅಮೆರಿದ ಮಾಧ್ಯಮಗಳು ವರದಿ ಮಾಡಿದ್ದವು.

ಕಾನ್ಯೆ ಮತ್ತು ಕಿಮ್ ನಡುವಿನ ವಿವಾಹ ವಿಚ್ಛೇದನ ಸೌಹಾರ್ದಯುತವಾಗಿಯೇ ಇರುತ್ತದೆ ಎಂದು ಅಮೆರಿಕದ ಸೆಲೆಬ್ರಿಟಿ ಗಾಸಿಪ್ ವೆಬ್ ಸೈಟ್ ಟಿಎಂಜೆಡ್ ವರದಿ ಮಾಡಿದೆ. ಕರ್ದಾಶಿಯನ್ ಅವರು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

2012ರಲ್ಲಿ ಕಿಮ್ ಮತ್ತು ಕಾನ್ಯೆ ಪ್ರಿತಿಸಿ, ಎರಡು ವರ್ಷಗಳ ನಂತರ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಜಗತ್ತಿನ ಖ್ಯಾತ ದಂಪತಿ ಎಂದು ಕಿಮ್- ಕಾನ್ಯೆ ಜೋಡಿ ಗುರುತಿಸಲ್ಪಟ್ಟಿತ್ತು.ಈ ದಂಪತಿಗಳಿಗೆ 7ರ ಹರೆಯದ ಮಗಳು ನಾರ್ಥ್, ಮಗ ಸೇಂಟ್ (5 ವರ್ಷ ), ಚಿಕಾಗೋ (3 ವರ್ಷ), ಮಗ ಸಾಲ್ಮ್ (21 ತಿಂಗಳು) ಹೆಸರಿನ ನಾಲ್ಕು ಮಕ್ಕಳಿದ್ದಾರೆ. ಇತ್ತೀಚೆಗೆ ಕಾನ್ಯೆ ವ್ಯೋಮಿಂಗ್ ನಲ್ಲಿ ವಾಸಿಸುತ್ತಿದ್ದು, ಕರ್ಡಾಷಿಯನ್ ನಾಲ್ವರು ಮಕ್ಕಳೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು.

ಕಾನ್ಯೆ ವೆಸ್ಟ್ ಅವರ ಬದುಕಿನಲ್ಲಿ ಇದು ಮೊದಲ ವಿವಾಹ ವಿಚ್ಛೇದನವಾಗಿದ್ದು, ಕರ್ದಾಶಿಯನ್ ಅವರದ್ದು ಮೂರನೇ ವಿವಾಹ ವಿಚ್ಛೇದನವಾಗಿದೆ. ‘ಕೀಪಿಂಗ್ ಅಪ್ ವಿದ್ ದಿ ಕರ್ದಾಶಿಯನ್’ ಎಂಬ ಅಮೆರಿಕದ ರಿಯಾಲಿಟಿ ಟಿವಿ ಸರಣಿ ಮೂಲಕ ಇವರು ಖ್ಯಾತಿ ಗಳಿಸಿದ್ದರು. ಚಿಕಾಗೊ ಮೂಲದ ರ್ಯಾ ಪರ್, ರೆಕಾರ್ಡ್ ಪ್ರೊಡ್ಯೂಸರ್ ಆಗಿದ್ದಾರೆ.

Edited By : Nirmala Aralikatti
PublicNext

PublicNext

20/02/2021 03:50 pm

Cinque Terre

29.94 K

Cinque Terre

1

ಸಂಬಂಧಿತ ಸುದ್ದಿ