ಚೀನಾ ಮಕ್ಕಳ ಆಟ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ ಮ್ಯಾನ್ ಹೋಲ್ ಮೇಲೆ ಕುಳಿತು ಪಟಾಕಿ ಅಂಟಿಸುವ ಮಕ್ಕಳು ಪಟಾಕಿ ಸಿಡಿಯುತ್ತಿದ್ದಂತೆ ಮ್ಯಾನ್ ಹೋಲ್ ಕ್ಯಾಪ್ ಓಪನ್ ಆಗುತ್ತದೆ ಸ್ಫೋಟದ ರಭಸಕ್ಕೆ ಮಕ್ಕಳು ಗಾಳಿಯಲ್ಲಿ ತೆಲುತ್ತಾರೆ..
ಇದು ಕೊಂಚ ಯಾಮಾರಿದರೂ ಪ್ರಾಣಕ್ಕೆ ಕುತ್ತು ಎಂದು ಗೊತ್ತಿದ್ದರು ಈ ಹುಚ್ಚಾಟ ಮಾತ್ರ ಮುಂದುವರೆದಿರುವುದು ವಿಪರ್ಯಾಸ..
ಮಕ್ಕಳ ಕೈಗೆ ಪಟಾಕಿ ಕೊಡುವ ಮುನ್ನ ಈ ವಿಡಿಯೋ ನೋಡಿ ಚೀನಾದಲ್ಲಿ ಸಂಭ್ರಮಾಚರಣೆ ವೇಳೆ ಬಾಲಕನೊಬ್ಬ ಪಟಾಕಿಯನ್ನು ಮ್ಯಾನ್ ಹೋಲ್ ನಲ್ಲಿಟ್ಟು ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಪುಟ್ಟ ಬಾಲಕನೊಬ್ಬ ಸ್ಫೋಟಕ ಪಟಾಕಿಯನ್ನು ಮ್ಯಾನ್ ಹೋಲ್ ನಲ್ಲಿ ಇಟ್ಟು ಬೆಂಕಿ ಹೊತ್ತಿಸಿದ ತಕ್ಷಣವೇ ಪಟಾಕಿ ಸ್ಫೋಟಗೊಂಡು ಪಾದಚಾರಿ ಮಾರ್ಗದ ಟೈಲ್ಸ್ ಗಳು ಹಾರಿಹೋಗಿವೆ.
ಗಾಬರಿಗೊಂಡ ಬಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ಫೋಟದಿಂದ ಅನಾಹುತವಾದದ್ದನ್ನು ಗಮನಿಸಿದ ಸುತ್ತಮುತ್ತಲ ಜನ ಅಲ್ಲಿಗೆ ಬಂದು ನೋಡಿದ್ದಾರೆ. ಇಡೀ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಆ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ.
ಮ್ಯಾನ್ ಹೋಲ್ ನಲ್ಲಿ ಮೀಥೇನ್ ಅನಿಲ ಇರುವುದರಿಂದ ಈ ರೀತಿ ಸ್ಫೋಟಗೊಂಡಿರಬಹುದು ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.
PublicNext
10/02/2021 09:18 am