ಕರಾಚಿ: ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ನಿಂದ ದಿಕ್ಕೆಟ್ಟು ಹೋಗಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದೆ. ಪಾಕ್ ಗೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎದುರಾಗಿದೆ. ಅದು ಇರಾನ್ ಪಾಕ್ ಮೇಲೆ ದಾಳಿ ಮಾಡಿದೆ. ಬಲೂಚಿಸ್ತಾನದಲ್ಲಿ ಇರಾನ್ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ತನ್ನ ಇಬ್ಬರು ಸೈನಿಕರನ್ನು ರಕ್ಷಿಸಲು ಇಂಥದ್ದೊಂದು ದಾಳಿ ನಡೆಸಿದೆ. ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ ಮಾದರಿಯಲ್ಲಿಯೇ ಇರಾನ್ ಕ್ರಮ ಕೈಗೊಂಡಿದೆ.
ಜೈಷ್ ಉಲ್ ಅಡ್ಲ್ ಉಗ್ರರ ಮೇಲೆ ಈ ದಾಳಿ ನಡೆಸಿರುವ ಇರಾನ್, ಉಗ್ರರ ವಶದಲ್ಲಿದ್ದ ನಮ್ಮ ಇಬ್ಬರು ಸೈನಿಕರನ್ನು ರಕ್ಷಣೆ ಮಾಡಿರುವುದಾಗಿ ಇರಾನ್ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಬುಧವಾರ ತಡರಾತ್ರಿ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸತ್ತಿರುವುದಾಗಿ ಇರಾನ್ ಹೇಳಿದೆ. ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿದ್ದಾರೆ. ಸೈನಿಕರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ಘೋಷಣೆ ಮಾಡಿದೆ.
PublicNext
04/02/2021 07:22 pm