ವಾಶಿಂಗ್ಟನ್: ವಾಶಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಬಿಲ್ಡಿಂಗ್ ನ ವೆಸ್ಟ್ ಫ್ರಂಟ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ನ್ಯಾಯಮೂರ್ತಿ ರಾಬರ್ಟ್ ಪ್ರಮಾಣವಚನ ಬೋಧಿಸಿದರು.
ಇದೇ ವೇಳೆ, ಭಾರತೀಯ-ಅಮೆರಿಕನ್ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ತಮಿಳುನಾಡು ಮೂಲದವರಾಗಿರುವ ಕಮಲಾಗೆ ನ್ಯಾಯಮೂರ್ತಿ ಸೋನಿಯಾ ಪ್ರಮಾಣವಚನ ಬೋಧಿಸಿದರು.
'ಅಮೆರಿಕಕ್ಕೆ ಇಂದು ಹೊಸ ದಿನ' ಎಂದು ಕಾರ್ಯಕ್ರಮಕ್ಕೆ ಮೊದಲು ಬೈಡನ್ ಟ್ವೀಟ್ ಮಾಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪ್ರದಾಯವನ್ನು ಮುರಿದರು. ಪ್ರಮಾಣವಚನದಲ್ಲಿ ನಿರ್ಗಮನ ಅಧ್ಯಕ್ಷರು ಭಾಗವಹಿಸುವುದು ಈ ತನಕ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿತ್ತು. ಸಮಾರಂಭದಲ್ಲಿ ಬರಾಕ್ ಒಬಾಮ, ಬಿಲ್ ಕ್ಲಿಂಟನ್, ಜಾರ್ಜ್ ಬುಶ್ ಭಾಗವಹಿಸಿದ್ದರು.
PublicNext
20/01/2021 10:40 pm