ಬೀಜಿಂಗ್: ಚೀನಾ ಸರ್ಕಾರ ವಿರುದ್ಧ ಮಾತನಾಡಿದ ಕೆಲವೇ ದಿನಗಳಲ್ಲಿ ಕಣ್ಮರೆಯಾದ ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸಂಸ್ಥಾಪಕ, ಕೋಟ್ಯಧಿಪತಿ ಜಾಕ್ ಮಾ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಉದ್ಯಮಿ ಜಾಕ್ ಮಾ ಅವರು ಚೀನಾದಲ್ಲಿ ಬುಧವಾರ 100 ಗ್ರಾಮೀಣ ಶಿಕ್ಷಕರನ್ನು ವಿಡಿಯೊ ಸಭೆೆ ಮೂಲಕ ಭೇಟಿಯಾದರು ಎಂದು ಸ್ಥಳೀಯ ಸರ್ಕಾರಿ ಮಾಧ್ಯಮ ವರದಿ ಮಾಡಿದೆೆ. ಈ ಮೂಲಕ ಜಾಕ್ ಮಾ ಕಳೆದ ಅಕ್ಟೋಬರ್‌ನಿಂದ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಜಾಕ್ ಮಾ ಅವರು ಅಕ್ಟೋಬರ್ 24ರಂದು ಶಾಂಘೈ ಸಮ್ಮೇಳನದಲ್ಲಿ ಮಾತನಾಡಿ, ''ಚೀನಾದಲ್ಲಿ ನಾವಿನ್ಯತೆಯನ್ನು ನಿಗ್ರಹಿಸಲಾಗುತ್ತಿದೆ. ಚೀನಾದ ಬ್ಯಾಂಕ್‌ಗಳು ಗಿರವಿ ಅಂಗಡಿಗಳಂತಾಗಿವೆ, ಹೆಚ್ಚು ಠೇವಣಿ ಇಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ'' ಎಂದು ಟೀಕಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಅಲಿಬಾಬಾ ಸಂಸ್ಥೆ ವಿರುದ್ಧ ಚೀನಾ ಸರ್ಕಾರ ಏಕಸ್ವಾಮ್ಯ ವಿರೋಧಿ ತನಿಖೆ ಆರಂಭಿಸಿತು. ಈ ಮಧ್ಯೆ ಜಾಕ್ ಮಾ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.
PublicNext
20/01/2021 12:08 pm