ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಪತ್ತೆಯಾಗಿದ್ದ ಶ್ರೀವಿಜಯ ಏರ್ ವಿಮಾನ ಸಮುದ್ರದಲ್ಲಿ ಪತನ

ಜಕಾರ್ತಾ: ಜಕಾರ್ತಾದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ದೇಶೀಯ ವಿಮಾನ ಬೋಯಿಂಗ್ 737-500 ಜಕಾರ್ತಾದಿಂದ ಮಧ್ಯಾಹ್ನ 1:56ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನವು ಜಕಾರ್ತದಿಂದ ಪಶ್ಚಿಮ ಕಲಿಮಾಂಟನ್‌ನ ಪೊಂಟಿಯಾನನಕ್‌ನಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ ಮಧ್ಯಾಹ್ನ 2:40ಕ್ಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ವಿಮಾನ ಸುಮಾರು 10,000 ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ರಡಾರ್‌ನೊಂದಿಗೆ ಸಂಪರ್ಕ ಕಳೆದುಕೊಂಡಿದೆ.

ಮಾನವ ದೇಹದ ಭಾಗಗಳು ಮತ್ತು ವಿಮಾನದ ಭಗ್ನಾವಶೇಷಗಳು ಪತ್ತೆಯಾಗಿವೆ ಎಂದು ತ್ರಿಶೂಲ ಕೋಸ್ಟ್ ಗಾರ್ಡ್ ಹಡಗಿನ ಕಮಾಂಡರ್ ಕ್ಯಾಪ್ಟನ್ ಇಕೊ ಸೂರ್ಯ ಹಾಡಿ ತಿಳಿಸಿದ್ದಾರೆ. ಈ ವಿಮಾನದಲ್ಲಿ ಸೇರಿದಂತೆ 59 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಇಂಡೋನೇಷ್ಯಾದ ಪತ್ರಿಕೆ ರೆಪುಬ್ಲಿಕ ವರದಿ ಮಾಡಿದೆ.

Edited By : Vijay Kumar
PublicNext

PublicNext

09/01/2021 10:57 pm

Cinque Terre

54.37 K

Cinque Terre

0

ಸಂಬಂಧಿತ ಸುದ್ದಿ