ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಾಜಕತೆ, ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ: ಸುಂದರ್​ ಪಿಚೈ

ನ್ಯೂಯಾರ್ಕ್: ಅರಾಜಕತೆ ಹಾಗೂ ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಾಹಕ ಸುಂದರ್​ ಪಿಚೈ ಅಮೆರಿಕದ ಸಂಸತ್​ ಮೇಲೆ ನಡೆದಿರುವ ದಾಳಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್ ಡಿ.ಸಿಯ ದೃಶ್ಯಗಳು ಇಂದು ನಮಗೆಲ್ಲರಿಗೂ ಆಘಾತಕಾರಿ ಮತ್ತು ಭಯಾನಕವಾಗಿದೆ. ಅದೃಷ್ಟವಶಾತ್ ನಮ್ಮ ನೌಕರರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಪರಿಶೀಲಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದು, ಕಚೇರಿ ಅಥವಾ ಕಟ್ಟಡಗಳ ಮೇಲೆ ಯಾವುದೇ ದಾಳಿ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಮ್ಮ ಉದ್ಯೋಗಿಗಳಿಗೆ ಭದ್ರತೆ ಒದಗಿಸುತ್ತೇವೆ ಎಂದು ಪಿಚೈ ತಿಳಿಸಿದ್ದಾರೆ.

ಮುಕ್ತ ಮತ್ತು ಸುರಕ್ಷಿತ ಚುನಾವಣೆಗಳನ್ನು ನಡೆಸುವುದು, ನಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಇಂತಹ ಪ್ರಜಾಪ್ರಭುತ್ವದ ಆಡಳಿತಕ್ಕೆ ಅಮೆರಿಕ ದೀರ್ಘ ಮತ್ತು ಹೆಮ್ಮೆಯ ಇತಿಹಾಸವನ್ನು ಹೊಂದಿದೆ. ಆದರೆ ವಾಷಿಂಗ್ಟನ್‌ನಲ್ಲಿ ಇಂದು ನಡೆಯುತ್ತಿರುವ ಕಾನೂನುಬಾಹಿರ ನಡೆ ಮತ್ತು ಹಿಂಸಾಚಾರವು ಪ್ರಜಾಪ್ರಭುತ್ವದ ವಿರೋಧವಾಗಿದೆ. ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

07/01/2021 03:51 pm

Cinque Terre

61.01 K

Cinque Terre

1

ಸಂಬಂಧಿತ ಸುದ್ದಿ