ಶ್ರೀಲಂಕಾ : ಅರಾಜಕತೆ ತಾಂಡವವಾಡುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಂ ಸಿಂಘೆ ಇಂದು ಪ್ರಮಾಣವಚನ ಸ್ವೀಕರಿಸಿದರು.ಶ್ರೀಲಂಕಾದ ಮುಖ್ಯನ್ಯಾಯಮೂರ್ತಿ ಜಯಂತ್ ಜಯಸೂರ್ಯ ಹಂಗಾಮಿ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಹಾಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ, ಇಂದು ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಂ ಸಿಂಘೆಗೆ ಪದಗ್ರಹಣ ಮಾಡಿದರು.
ವಿಕ್ರೆಮೆಸಿಂಗೆ ತಾತ್ಕಾಲಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರಷ್ಟೇ. ನೂತನ ಅಧ್ಯಕ್ಷರ ಆಯ್ಕೆ ಆಗುವವರೆಗೆ ಮಾತ್ರ ಜಾವಾಬ್ದಾರಿಯನ್ನ ವಹಿಸಿಕೊಳ್ಳಲಿದ್ದಾರೆ. ಅಂದರೆ ಮುಂದಿನ 7 ದಿನಗಳವರೆಗೆ ಮಾತ್ರ ಅವರು ಶ್ರೀಲಂಕಾ ಅಧ್ಯಕ್ಷರಾಗಿರಲಿದ್ದಾರೆ ಎಂದು ಲಂಕಾ ಸ್ಪೀಕರ್ ತಿಳಿಸಿದ್ದಾರೆ.
PublicNext
15/07/2022 07:59 pm