ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಡನ್‌ನಲ್ಲಿ 'ಗೋ ಪೂಜೆ' ಮಾಡಿದ ರಿಷಿ ಸುನಕ್' ದಂಪತಿ

ಬ್ರಿಟಿಷ್ ಪ್ರಧಾನಿ ರೇಸ್ ನಲ್ಲಿ ಫೈನಲಿಸ್ಟ್ ಆಗಿರುವ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಅವರ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಅದೇ ರೀತಿ ಲಂಡನ್ ನಲ್ಲಿ ‘ಗೋ ಪೂಜೆ’ ಮಾಡುವ ಮೂಲಕ ಮತ್ತೆ ಜನಮನ ಗೆದ್ದಿದ್ದಾರೆ..

ಅಂತಹದ್ದೇನಿದೆ ಆ ವಿಡಿಯೋದಲ್ಲಿ ಅಂತ ನಿಮಗೆ ತಿಳಿದುಕೊಳ್ಳಲು ಕುತೂಹಲ ಜಾಸ್ತಿ ಇರಬೇಕಲ್ಲವೇ, ವಿಡಿಯೋದಲ್ಲಿ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಲಂಡನ್ ನಲ್ಲಿ ‘ಗೋ ಪೂಜೆ’ ಮಾಡುತ್ತಿರುವುದನ್ನು ನಾವು ನೋಡಬಹುದು. ಎನ್.ಆರ್.ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರೊಂದಿಗೆ 42 ವರ್ಷದ ರಿಷಿ ಸುನಕ್ ಅವರು ಹಸುವಿನ ಆವರಣಕ್ಕೆ ಭೇಟಿ ನೀಡಿದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

ವಿಡಿಯೋದಲ್ಲಿ, ಈ ದಂಪತಿಗಳು ಈ ಸಂದರ್ಭದಲ್ಲಿ ಒಂದು ಹಸುವಿನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಅವರ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ.

Edited By : Abhishek Kamoji
PublicNext

PublicNext

26/08/2022 12:57 pm

Cinque Terre

75.4 K

Cinque Terre

4

ಸಂಬಂಧಿತ ಸುದ್ದಿ