ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಂದು ರೀತಿಯಲ್ಲಿ ದಿನವೂ ಸುದ್ದಿಯಲ್ಲಿಯೇ ಇರುತ್ತಾರೆ. ಆದರೆ, ಅವರ ತಂದೆ ಎರೋಲ್ ಮಸ್ಕ್ ಈಗ ಬೇರೆ ವಿಚಾರಕ್ಕೇನೆ ಸುದ್ದಿಯಲ್ಲಿದ್ದಾರೆ.
ಹೌದು. ಎಲಾನ್ ಮಸ್ಕ್ ರೀತಿಯ ಪೀಳಿಗೆಯನ್ನ ಬೆಳೆಸಲು ನಿಮ್ಮ ವೀರ್ಯ ದಾನ ಮಾಡಿ ಎಂದು, ಕೊಲಂಬಿಯಾ ದೇಶದ ಕಂಪನಿಯೊಂದು ಎರೋಲ್ ಮಸ್ಕ್ ಗೆ ಕೇಳಿತ್ತು. ಅದೇ ವಿಚಾರವನ್ನ ಈಗ ಎರೋಲ್ ಮಸ್ಕ್ ಹೇಳಿಕೊಂಡಿದ್ದಾರೆ.
"ನನ್ನ ವೀರ್ಯ ಪಡೆದ ಕಂಪನಿಯು ನನಗೆ ಹಣ ಕೊಡಲಿಲ್ಲ.ಆದರೆ,ಪ್ರಯಾಣದ ಖರ್ಚು ಮತ್ತು ಉಳಿದುಕೊಳ್ಳಲು ಪಂಚತಾರಾ ಹೋಟೆಲ್ ವ್ಯವಸ್ಥೆ ಮಾಡಿದ್ದರು" ಎಂದು 76 ವರ್ಷದ ಎರೋಲ್ ಮಸ್ಕ್ ತಿಳಿಸಿದ್ದಾರೆ.
PublicNext
20/07/2022 11:04 pm