ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮ್ಮಿ ಶವ ಬಾಕ್ಸ್ ಓಪನ್ : ಒಳಗಡೆ ಏನ್ ಇತ್ತು ಗೊತ್ತಾ? ವಿಡಿಯೊ ವೈರಲ್

ಕೈರೋ: ಸಾರ್ವಜನಿಕರ ಎದುರಲ್ಲಿ ಈಜಿಪ್ಟ್ ನ 2,500 ವರ್ಷಗಳಷ್ಟು ಹಳೆಯ ಮಮ್ಮಿ ಶವಪೆಟ್ಟಿಗೆ ತೆರೆಯಲಾಗಿದೆ.

ಮಮ್ಮಿ ಅಂದ್ರೆ (ರಕ್ಷಿತ ಶವ)ಗಳ ತಾಣ ಈಜಿಪ್ಟನ್ ಲ್ಲಿ ಪ್ರಾಚೀನ ಶವ ಪೆಟ್ಟಿಗೆಗಳು ಸಿಗುವುದು ಸಾಮಾನ್ಯ ಹೀಗೆ 2,500 ವರ್ಷಗಳಷ್ಟು ಹಳೆಯದಾದ ಶವ ಪಟ್ಟಿಗೆವೊಂದನ್ನಾ ಪುರಾತತ್ವಶಾಸ್ತ್ರಜ್ಞರು ಸಾರ್ವಜನಿಕರ ಎದುರಲ್ಲಿ ತೆರೆದಿದ್ದಾರೆ.

ಸಕ್ಕಾರದಲ್ಲಿ ಕಳೆದ ವರ್ಷ ಒಟ್ಟು 59 ಪ್ರಾಚೀನ ಶವಪೆಟ್ಟಿಗೆಗಳು ದೊರೆತಿದ್ದು, ಈ ಪೈಕಿ ಮೊದಲನೆಯ ಶವಪೆಟ್ಟಿಗೆಯನ್ನು ತೆರೆಯಲಾಗಿದೆ.

ಈ ಪೆಟ್ಟಿಗೆಯಲ್ಲಿ ಅತ್ಯಂತ ಸುರಕ್ಷಿತ ಸ್ಥಿತಿಯಲ್ಲಿರುವ ಪ್ರಾಚೀನ ಮೃತದೇಹ ದೊರೆತಿದೆ.

ಈ ಕುರಿತು ಈಜಿಪ್ಟ್ ನ ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆ ವಿಡಿಯೋ ಬಿಡುಗಡೆ ಮಾಡಿದ್ದು, 2,500 ವರ್ಷಗಳ ಹಿಂದಿನ ಮಮ್ಮಿಯ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ .

ಸಕ್ಕಾರಾ ಈಜಿಪ್ಟ್ ನ ವಿಶಾಲವಾದ, ಪ್ರಾಚೀನ ಸ್ಮಶಾನವಾಗಿದ್ದು, ಇದು ಪ್ರಾಚೀನ ನಗರವಾದ ಮೆಂಫಿಸ್ ನ ನೆಕ್ರೋಪೊಲಿಸ್ ಆಗಿ ಕಾರ್ಯನಿರ್ವಹಿಸಿತ್ತು.

ಸದ್ಯ ಈ ಪ್ರದೇಶದಲ್ಲಿ ದೊರೆತಿರುವ ಮರದ ಶವಪೆಟ್ಟಿಗೆಯಲ್ಲಿರುವ ಮಮ್ಮಿ ಪ್ರಾಚೀನ ಈಜಿಪ್ಟ್ ನ ಪುರೋಹಿತ ಅಥವಾ ಪ್ರತಿಷ್ಠಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಈ ಮಮ್ಮಿ ಶವಪೆಟ್ಟಿಗೆಯನ್ನು ಈಜಿಪ್ಟ್ನ ಗಿಜಾದ ಬೃಹತ್ ವಸ್ತು ಸಂಗ್ರಹಾಲಯಕ್ಕೆ ರವಾನಿಸಲಾಗುವುದು ಎಂದು ಪ್ರವಸೋದ್ಯಮ ಇಲಾಖೆ ಸ್ಪಷ್ಟಪಡಿಸಿದೆ.

Edited By : Nirmala Aralikatti
PublicNext

PublicNext

06/10/2020 12:17 pm

Cinque Terre

87.61 K

Cinque Terre

0

ಸಂಬಂಧಿತ ಸುದ್ದಿ