ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೀನಾ ದೇಶಕ್ಕೆ ಕೊರೊನಾ ಕಂಟಕ- ಜನ ಜೀವನ ಅಸ್ತವ್ಯಸ್ತ

ಬೀಜಿಂಗ್: ಕೊರೊನಾ ದಿಂದ ಚೀನಾ ದೇಶದ ಪರಿಸ್ಥಿತಿ ಹದಗೆಟ್ಟಿದೆ. ದಿನೇ ದಿನೇ ಇಲ್ಲಿ ಸಮಸ್ಯೆಗಳೇ ಹೆಚ್ಚಾಗುತ್ತಿದೆ. ಕ್ವಾರಂಟೈನ್‌ಗಾಗಿಯೇ ಜಾಗವೂ ಸಾಲುತ್ತಿಲ್ಲ. ಅಂತಹ ಪರಿಸ್ಥಿತಿ ಇಲ್ಲಿ ಎದುರಾಗಿದೆ. 2020 ಕ್ಕಿಂತಲೂ ಸ್ಥಿತಿ ಇಲ್ಲಿ ಚಿಂತಾಜನಕವಾಗಿಯೆ ಇದೆ.

ಚೀನಾದಲ್ಲಿ ದಿನೇ ದಿನೇ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಇದರಿಂದ ವೈದ್ಯಕೀಯ ಸಾಮಗ್ರಿಗಳ ಕೊರತೆನೂ ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಗಂಭೀರ ಆಗಬಹುದು ಅಂತಲೇ ತಜ್ಞರು ಹೇಳುತ್ತಿದ್ದಾರೆ.

ಕಳೆದ 10 ವಾರಗಳಲ್ಲಿ ಇಲ್ಲಿ 14,000 ಕೊರೊನಾ ಕೇಸ್ ಪತ್ತೆ ಆಗಿವೆ.ದುರಂತ ಅಂದ್ರೆ ಒಮೆಕ್ರಾನ್‌ನಿಂದ ಇಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಚೀನಾದ ಹಲವು ನಗರದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.

Edited By :
PublicNext

PublicNext

18/03/2022 09:15 pm

Cinque Terre

30.34 K

Cinque Terre

2

ಸಂಬಂಧಿತ ಸುದ್ದಿ