ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ಅವರು ಅಂತಿಮವಾಗಿ ಬೆದರಿಕೆಯೊಡ್ಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಮಾಣವಚನ ಸ್ವೀಕರಿಸುವ ದಿನದಂದು ತಾವು ಶ್ವೇತಭವನ ಖಾಲಿ ಮಾಡುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದಾರೆ ಎಂದು ಪ್ರಮುಖ ಸುದ್ದಿ ವಾಹಿನಿ ಸಿಎನ್ ಎನ್ ವರದಿ ಮಾಡಿದೆ.
ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಬೇಕಿದೆ.
ಆದರೆ, ಅವರಿಗಾಗಿ ತಾವು ಶ್ವೇತಭವನ ಖಾಲಿ ಮಾಡುವುದಿಲ್ಲ ಎಂದು ಟ್ರಂಪ್ ಪಟ್ಟು ಹಿಡಿದಿದ್ದಾರೆ.
ಒಂದೊಮ್ಮೆ ಟ್ರಂಪ್ ಇದೇ ರೀತಿ ವ್ಯವಹರಿಸಿದರೆ.. ಅಮೆರಿಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಅಪಾಯವಿದೆ.
ನವೆಂಬರ್ 3 ರಂದು ನಡೆದ ಚುನಾವಣೆಯಲ್ಲಿ ಬೈಡನ್ ರಿಗ್ಗಿಂಗ್ ನಡೆಸಿ ಗೆದ್ದಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಬೈಡನ್ ಅವರ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಗಳಿಗೆ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಬೈಡೆನ್ ಅವರಿಗೆ 306, ಟ್ರಂಪ್ ಅವರಿಗೆ 232 ಎಲಕ್ಟೋರಲ್ ಕಾಲೇಜ್ ಮತ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.
PublicNext
18/12/2020 10:56 pm