ವಾಷಿಂಗ್ಟನ್ : ಕೊರೊನಾ ಕಲಿಸಿದ ಕೆಲವು ಪಾಠಗಳು ಬಹುತೇಕರ ಬದುಕನ್ನಾ ಬದಲಿಸಿದೆ.
ದುಬಾರಿ ಖರ್ಚಿಗೆ ಜನ ಬ್ರೇಕ್ ಹಾಕಿ ಅಲ್ಪತೃಪ್ತರಾಗುವುದನ್ನು ಕಲಿತಿದ್ದಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಲಕ್ಷಾಂತರ ರೂಪಾಯಿ ಟಿಪ್ಸ್ ಕೊಡುವ ಮೂಲಕ ಸುದ್ದಿಯಾಗಿದ್ದಾನೆ.
ಅಮೆರಿಕದ 'ಆಂಥೋನಿ ಅಟ್ ಪ್ಯಾಕ್ಸನ್' ರೆಸ್ಟೋರೆಂಟ್ ಗೆ ಗ್ರಾಹಕ ಬಂದಿದ್ದ.
ಈತ ರೆಸ್ಟೋರೆಂಟ್ ನಲ್ಲಿ ಕುಳಿತು ಊಟ ಮಾಡಿದ್ದಾನೆ. ಊಟಕ್ಕೆ 205 ಡಾಲರ್ (15 ಸಾವಿರ ರೂಪಾಯಿ) ಬಿಲ್ ಆಗಿದ್ದು, ಅದನ್ನು ಗಿಯನ್ನಾ ಡಿ ಏಂಜೆಲೊ ಹೆಸರಿನ ವೇಟರ್ ಆತನಿಗೆ ತಂದುಕೊಟ್ಟಿದ್ದಾನೆ.
ಆದರೆ ಆತ ಬಿಲ್ ಅಮೌಂಟ್ ನ ಜತೆ 5000 ಡಾಲರ್ ಅಂದರೆ ಸರಿಸುಮಾರು 36 ಲಕ್ಷ ರೂಪಾಯಿ ಟಿಪ್ಸ್ ಕೊಟ್ಟಿದ್ದಾನೆ.
ಆ ಹಣವನ್ನು ನೋಡಿದ ಗಿಯನ್ನಾ ಒಮ್ಮೆ ಗಾಬರಿಯಾಗಿದ್ದಾಳೆ. ನಂತರ ಅದನ್ನು ಸ್ವೀಕರಿಸಿದ್ದಾಳೆ.
ಈ ರೀತಿಯ ವಿಶಿಷ್ಟ ಗ್ರಾಹಕ ತಮ್ಮ ರೆಸ್ಟೋರೆಂಟ್ ಗೆ ಬಂದಿದ್ದಾಗಿ ಆಂಥೋನಿ ಅಟ್ ಪ್ಯಾಕ್ಸನ್ ರೆಸ್ಟೋರೆಂಟ್ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಅದರ ಜತೆ ಆತನ ಬಿಲ್ಲಿನ ಫೋಟೋವನ್ನೂ ಶೇರ್ ಮಾಡಲಾಗಿದೆ.
PublicNext
17/12/2020 04:10 pm