ವಿಶ್ವ ಸಂಸ್ಥೆಯ 2020ರ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ)ದಲ್ಲಿ ಭಾರತವು 129ನೇ ಸ್ಥಾನದಿಂದ 131ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಬಿಡುಗಡೆ ಮಾಡಿದ ವರದಿಯಲ್ಲಿ ಇದನ್ನು ಉಲ್ಲೇಖೀಸಲಾಗಿದೆ.
ಸೂಚ್ಯಂಕದಲ್ಲಿ ನಾರ್ವೆ ಅಗ್ರಸ್ಥಾನದಲ್ಲಿದ್ದರೆ, ಐರ್ಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಹಾಂಗ್ ಕಾಂಗ್ ಮತ್ತು ಐಸ್‌ಲ್ಯಾಂಡ್ ಮೊದಲ ಐದು ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.
ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯದಲ್ಲಿ ಗರಿಷ್ಠ ಅಂಕ 1. ಭಾರತವು ಇದರಲ್ಲಿ 0.645 ಅಂಕ ಪಡೆದಿದೆ. 2019ರಲ್ಲಿ ಭಾರತವು 0.647 ಅಂಕ ಪಡೆದಿತ್ತು. ಹೀಗಾಗಿ 129ನೇ ರ್‍ಯಾಂಕ್‌ನಲ್ಲಿತ್ತು. ಈ ಬಾರಿ ಅಂಕ ಇಳಿಕೆ ಆಗಿರುವ ಕಾರಣ ರ್‍ಯಾಂಕ್‌ನಲ್ಲಿಯೂ ಇಳಿಕೆಯಾಗಿದೆ.
PublicNext
17/12/2020 07:42 am