ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಮದುವೆವೊಂದರಲ್ಲಿ ವರನಿಗೆ ಕೊಟ್ಟ ಗಿಫ್ಟ್ ನೋಡಿದ್ರೆ ದಂಗಾಗತ್ತಿರಾ!

ಇಸ್ಲಾಮಾಬಾದ್ : ಮದುವೆಯಲ್ಲಿ ಗಿಫ್ಟ್ ಕೊಡುವುದು ಸಾಮಾನ್ಯ ಅದು ಚಿನ್ನ,ಬೆಳ್ಳಿ,ಬಟ್ಟೆ,ಅಥವಾ ಇನ್ನೂ ಬೇರೆ ಬೇರೆ ವಸ್ತುಗಳನ್ನು ಕೊಡುವುದು ಮಾಮೂಲಿ.

ಆದ್ರೆ ಪಾಕ್ ನ ಮದುವೆವೊಂದರಲ್ಲಿ ವರನಿಗೆ ಕೊಟ್ಟ ಗಿಫ್ಟ್ ನೋಡಿದ್ರೆ ನಿಮ್ಗೆ ಶಾಕ್ ಆಗುವುದು ಗ್ಯಾರಂಟಿ.

ಹೌದು ಇಲ್ಲೊಬ್ಬ ವರನಿಗೆ ಎಕೆ-47 ಗನ್ ಗಿಫ್ಟ್ ನೀಡುವ ವಿಡಿಯೋ ವೈರಲ್ ಆಗಿದೆ. 30 ಸೆಕೆಂಡ್ ಗಳ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

” ಕಲಾಶ್ನಿಕೋವ್ ರೈಫಲ್ ಮದುಮಗನಿಗೆ ಕೊಡುಗೆಯಾಗಿ” ಎಂದು ಬರೆಯಲಾಗಿದೆ.

ಮಹಿಳೆಯೊಬ್ಬಳು ವರನಿಗೆ ರೈಫಲ್ ನೀಡುತ್ತಿದ್ದು, ಅದನ್ನು ಸ್ವೀಕರಿಸುವ ವರ ಅಥವಾ ವಧುವಿನ ಮುಖದಲ್ಲಿ ಯಾವುದೇ ಆತಂಕ ಕಾಣುವುದಿಲ್ಲ.

ಮದುವೆ ಪಾಕಿಸ್ತಾನದಲ್ಲಿ ನಡೆದಿದ್ದಾಗಿದ್ದು,ವಿಡಿಯೋ ಸಾಕಷ್ಟು ಸಂಚಲನ ಮೂಡಿಸಿದೆ.

ಈಗಾಗಲೇ 188 ಸಾವಿರ ಜನ ವಿಡಿಯೋ ನೋಡಿದ್ದು, 2.5 ಸಾವಿರ ಜನ ಲೈಕ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

28/11/2020 12:31 pm

Cinque Terre

77.13 K

Cinque Terre

8

ಸಂಬಂಧಿತ ಸುದ್ದಿ