ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೋ ಬೈಡನ್ ಗೆಲುವು : ಸಂಭ್ರಮಿಸಿದ ಭಾರತೀಯ ಅಮೆರಿಕನ್ನರು

ವಾಷಿಂಗ್ಟನ್ : ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗುತ್ತಿದ್ದಂತೆ ಖುಷ್ ಆದ ಭಾರತೀಯ ಅಮೆರಿಕನ್ನರು ಕಣಿದು ಕುಪ್ಪಳಿಸಿದ್ದಾರೆ.

‘ಇದು ಭಾರತೀಯ ಅಮೆರಿಕನ್ನರ ಪಾಲಿಗೆ ಮಹತ್ವದ ದಿನ’ ಎಂದು ‘ಇಂಡಿಯಾಸ್ಪೊರಾ’ ಸ್ಥಾಪಕ ಎಂ.ರಂಗಸ್ವಾಮಿ ಹೇಳಿದ್ದಾರೆ.

‘ಭಾರತದ ಜತೆಗಿನ ಬಾಂಧವ್ಯ ವೃದ್ಧಿಯನ್ನು ಜೋ ಬೈಡನ್ ದೀರ್ಘ ಅವಧಿಯಿಂದ ಬೆಂಬಲಿಸುತ್ತಾ ಬಂದಿದ್ದಾರೆ.

ಭಾರತ–ಅಮೆರಿಕ ಪರಮಾಣು ಒಪ್ಪಂದಕ್ಕೆ ಅನುಮೋದನೆ ಪಡೆಯಲು ಸೆನೆಟರ್ ಆಗಿ ಅವರು ನೇತೃತ್ವ ವಹಿಸಿದ್ದರು.

ಉಪಾಧ್ಯಕ್ಷರಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೆ, ಭಾರತವನ್ನು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ಎಂದು ಘೋಷಿಸುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿಯೂ ಭಾರತವನ್ನು ಬೆಂಬಲಿಸಿದ್ದಾರೆ ಎಂದು ರಂಗಸ್ವಾಮಿ ಹೇಳಿದ್ದಾರೆ.

‘ಅಮೆರಿಕದ ದೇಶಭಕ್ತರು ತಮ್ಮ ದೇಶವನ್ನು ವಾಪಸ್ ಪಡೆದಿದ್ದಾರೆ’ ಎಂದು ನ್ಯೂಯಾರ್ಕ್ ನ ಮಾಜಿ ಅಟಾರ್ನಿ ಜನರಲ್ ಪ್ರೀತ್ ಭರಾರ ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

08/11/2020 08:50 am

Cinque Terre

63.7 K

Cinque Terre

2

ಸಂಬಂಧಿತ ಸುದ್ದಿ