ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪದತ್ಯಾಗ ಮಾಡುವರೇ ರಷ್ಯಾ ಅಧ್ಯಕ್ಷ ಪುಟಿನ್ !

ಮಾಸ್ಕೋ : ಸದ್ಯ ಅಮೆರಿಕದಲ್ಲಿ ಅಧ್ಯ ಕ್ಷ ಗದ್ದುಗೆಗಾಗಿ ತೀವ್ರ ಗುದ್ದಾಟ ನಡಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಆದ್ರೆ ವಿಪರ್ಯಾಸ ನೋಡಿ ಸಿಕ್ಕ ಅಧ್ಯಕ್ಷ ಸ್ಥಾನದಲ್ಲಿದ್ದು ಆಡಳಿತ ನಡೆಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ.

ಹೌದು ದಶಕಗಳಿಂದ ರಷ್ಯಾವನ್ನು ಆಳುತ್ತಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾರ್ಕಿನ್ಸನ್ (ಮೆದುಳು ಮತ್ತು ನರ ಮಂಡಲಕ್ಕೆ ಸಂಬಂಧಿಸಿದ ರೋಗ) ಕಾಯಿಲೆಗೆ ತುತ್ತಾಗಿದ್ದು, ಜನವರಿಯಲ್ಲಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಪುಟಿನ್ ಅವರ 37 ವರ್ಷದ ಗೆಳತಿ ಅಲಿನಾ ಕಬಾಇವಾ ಮತ್ತು ಇಬ್ಬರು ಪುತ್ರಿಯರು ಅಧ್ಯಕ್ಷ ಹುದ್ದೆಯನ್ನು ತ್ಯಜಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮಾಸ್ಕೋ ರಾಜ್ಯಶಾಸ್ತ್ರಜ್ಞ ವಲೆರಿ ಸೊಲೊವೆಯಿ ಅವರ ಹೇಳಿಕೆಯ ಪ್ರಕಾರ, ಕುಟುಂಬವೊಂದು ಪುಟಿನ್ ಅವರ ಮೇಲೆ ಭಾರೀ ಪ್ರಭಾವ ಹೊಂದಿದೆ.

ಹೀಗಾಗಿ 68 ವರ್ಷ ವಯಸ್ಸಿನ ಪುಟಿನ್ ಜನವರಿಯಲ್ಲಿ ಅಧಿಕಾರವನ್ನು ತ್ಯಜಿಸಲು ಉದ್ದೇಶಿಸಿದ್ದಾರೆ ಎಂದು ‘ದ ಸನ್’ ಪತ್ರಿಕೆ ವರದಿ ಮಾಡಿದೆ.

ವರದಿಗಳ ಪ್ರಕಾರ ಪುಟಿನ್ ಗೆ ತಮ್ಮ ಕರ್ಚಿಯ ಮೇಲೆ ಕೈಚಾಚಿಕೊಳ್ಳುವಾಗ ನೋವು ಹಾಗೂ ಕಾಲುಗಳಲ್ಲಿ ನಡುಕ ಕಾಣಿಸಿಕೊಳ್ಳುತ್ತಿದೆ.

ರಷ್ಯಾದ ಸಂಸತ್ತು ಮಾಜಿ ಅಧ್ಯಕ್ಷರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಜೀವನ ಪರ್ಯಂತ ರಕ್ಷಣೆ ನೀಡುವ ಕಾನೂನುವೊಂದನ್ನು ಜಾರಿಗೊಳಿಸಲು ಹೊರಟಿರುವುವಾಗಲೇ ಪುಟಿನ್ ಅವರ ಪದತ್ಯಾದ ವದಂತಿಗಳು ಹರಿದಾಡಲು ಆರಂಭಿಸಿವೆ.

ಆದರೆ ಪುಟಿನ್ ಆಪ್ತ ಮೂಲಗಳು ಮಾತ್ರ, ಇದೊಂದು ವದಂತಿ ಎಂದು ವರದಿಯನ್ನು ತಳ್ಳಿಹಾಕಿವೆ.

Edited By : Nirmala Aralikatti
PublicNext

PublicNext

07/11/2020 12:23 pm

Cinque Terre

41.79 K

Cinque Terre

0

ಸಂಬಂಧಿತ ಸುದ್ದಿ