ಮೆಕ್ಸಿಕೋ: ನೂರಕ್ಕೂ ಹೆಚ್ಚು ಜನ ವಲಸಿಗರು ಸಾಗುತ್ತಿದ್ದ ಟ್ರಕ್ ವೊಂದು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ 53 ಜನ ಮೃತಪಟ್ಟು ಸುಮಾರು 54 ಜನ ಗಾಯಗೊಂಡ ಘಟನೆ ಮೆಕ್ಸಿಕೋ ದಲ್ಲಿ ನಡೆದಿದೆ.
ಸರಕು ಸಾಗಣೆ ಟ್ರಕ್‌ವೊಂದು 100 ಕ್ಕೂ ಹೆಚ್ಚು ಜನರನ್ನ ತುಂಬಿಕೊಡು ಸಾಗುತ್ತಿತ್ತು. ಚಿಯಾಪಾಸ್ ರಾಜ್ಯದ ರಾಜಧಾನಿ ಟುಕ್ಸ್ಟೈ ಗುಟೈರೆಜ್ ಕಡೆಗೆ ಈ ಟ್ರಕ್ ಹೊರಟಿತ್ತು. ಆಗಲೇ ಟ್ರಕ್ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ.
ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದ ವಲಸಿಗರನ್ನ ಮಧ್ಯೆ ಅಮೆರಿಕದ ವಲಸೆ ಬಂದವರು ಎಂದು ಹೇಳಲಾಗುತ್ತಿದೆ. ದುರ್ಮರಣ ಹೊಂದಿದವರ ಗುರುತು ಪತ್ತೆಯಾಗಿಲ್ಲ.
ತೀಕ್ಷಣ ತಿರುವನ್ನ ತೆಗೆದುಕೊಂಡಾಗಲೇ ಈ ಟ್ರಕ್ ಪಲ್ಟಿ ಆಗಿದೆ ಎಂದು ರಾಜ್ಯ ನಾಗರಿಕ ರಕ್ಷಣಾ ಸೇವೆಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ಮೊರೆನೊ ಹೇಳಿದ್ದಾರೆ.ಅತಿ ಅಪಘಾತಕ್ಕೀಡಾದ ಟ್ರಕ್ ವೇಗದಲ್ಲಿಯೇ ಹೋಗುತ್ತಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳೂ ಹೇಳಿದ್ದಾರೆ.
PublicNext
10/12/2021 03:30 pm