ಢಾಕಾ : ಬಂಗಾಳಕೊಲ್ಲಿಯಲ್ಲಿ ರೋಹಿಂಗ್ಯಾ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಮುಗುಚಿದ್ದು, 24ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಕಣ್ಮರೆಯಾದವರೆಲ್ಲ ಸಮುದ್ರದಲ್ಲಿ ಮುಳುಗಿರುವ ಭೀತಿ ಇದೆ ಎಂದು ವಿಶ್ವಸಂಸ್ಥೆ ಮತ್ತು ಬಾಂಗ್ಲಾದೇಶದ ಪೊಲೀಸರು ತಿಳಿಸಿದ್ದಾರೆ.
ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿದ್ದ ಶಿಬಿರಗಳಲ್ಲಿದ್ದ ಸಾವಿರಾರು ವಲಸಿಗರನ್ನು ದ್ವೀಪ ಪ್ರದೇಶವೊಂದಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಆ. 14ರ ಬೆಳಿಗ್ಗೆ ಭಸನ್ ಚರ್ ದ್ವೀಪದ ಬಳಿ ದೋಣಿ ಮುಗುಚಿದೆ ಎಂದು ಮಾಹಿತಿ ನೀಡಲಾಗಿದೆ. ನೋಖಾಲಿ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, 'ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಸುಮಾರು 40 ಮಂದಿ ವಲಸಿಗರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು, ಸುಮಾರು 14 ಜನರನ್ನು ಮೀನುಗಾರರು ರಕ್ಷಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
PublicNext
15/08/2021 06:42 pm