ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳನ್ನು ಕಾಪಾಡಿ ಮರುಕ್ಷಣವೇ ಕೊನೆಯುಸಿರೆಳೆದ ತಾಯಿ..!

ಮಾಸ್ಕೋ: ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಕ್ಕಳನ್ನು ಬಚ್ಚಾವ್ ಮಾಡಿ ಕೊನೆಗೆ ತಾವೇ ಕೊನೆಯುಸಿರೆಳೆದ ಘಟನೆ ರಷ್ಯಾದಲ್ಲಿ ನಡೆದಿದೆ.

ಹೌದು ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಐವರು ಮಕ್ಕಳನ್ನು ಕಾಪಾಡಿದ ತಾಯಿ ಮರುಕ್ಷಣವೇ ದುರಂತ ಸಾವಿಗೀಡಾಗಿದ್ದಾರೆ.

ಗುಲ್ನರಾ ಕೊಸ್ಟೆಲ್ನ್ಯುಕ್ (31) ಮಕ್ಕಳಿಗಾಗಿ ಪ್ರಾಣ ತ್ಯಾಗ ಮಾಡಿದ ತಾಯಿ.

ಸುಟ್ಟು ಕರಕಲಾಗಿದ್ದ ಮನೆಯ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಅದರಡಿಯಲಿ ಸಿಲುಕಿ ಗುಲ್ನರಾ ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ 14 ವರ್ಷಕ್ಕಿಂತ ಕೆಳಗಿನ ತನ್ನ ಐದೂ ಮಕ್ಕಳನ್ನು ಗುಲ್ನರಾ ಕಾಪಾಡಿದ್ದಾರೆ.

ಅಡುಗೆ ಮನೆಯಲ್ಲಿ ಸ್ಟೌನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಮನೆಯಲ್ಲಿ ಮರದ ವಸ್ತು ತುಂಬಾ ಇದ್ದಿದ್ದರಿಂದ ಬೆಂಕಿ ಇಡೀ ಮನೆಯನ್ನೇ ಆವರಿಸಿತ್ತು ಈ ವೇಳೆ ತಾಯಿ ಕಿಟಕಿ ಗಾಜನ್ನು ಮುರಿದು ಮಕ್ಕಳನ್ನು ಹೊರಹಾಕಿದ್ದರು.

ಅದಾದ ಬಳಿಕ ತಾನೂ ಹೊರಬರಲು ಯತ್ನಿಸುವಾಗ ಮನೆಯಲ್ಲಿ ಮರದ ಬೀಮ್ ಆಕೆಯ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ ಬಳಿಕ ಗುಲ್ನರಾ ಮೃತದೇಹ ಪತ್ತೆಯಾಗಿದೆ.

ಮಕ್ಕಳಿಗೂ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
PublicNext

PublicNext

28/11/2020 06:44 pm

Cinque Terre

58.84 K

Cinque Terre

0

ಸಂಬಂಧಿತ ಸುದ್ದಿ