ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಂಪ್​ ವಿರೋಧಿಸುವವರು ಅಮೆರಿಕ ಬಿಟ್ಟು ಇಲ್ಲಿಗೆ ಬನ್ನಿ !

ರೋಮ್ :‌ ಇತ್ತೀಚೆಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿದೆ. ಕಮಲಾ ಹ್ಯಾರಿಸ್ ಅವರಿಗಿಂತ ಹೆಚ್ಚು ಮತಗಳನ್ನು ನೀಡಿ ಅಮೆರಿಕದ ಜನತೆ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯ ವಾತಾವರಣ ತಣ್ಣಗಾಗುತ್ತಿದ್ದರೂ ಕಮಲಾ ಸೋಲಿನಿಂದ ಚೇತರಿಸಿಕೊಳ್ಳಲಾಗದೆ ಟ್ರಂಪ್ ಗೆಲುವಿನಿಂದ ಕಂಗೆಟ್ಟವರು ಹಲವರಿದ್ದಾರೆ. ಈ ಜನರ ಹತಾಶೆಯನ್ನು ಕಡಿಮೆ ಮಾಡುವ ಸಲುವಾಗಿ ಇಟಲಿಯ ಸಣ್ಣ ಗ್ರಾಮವೊಂದು ಅಮೆರಿಕನ್ನರಿಗೆ ಗೋಲ್ಡನ್ ಆಫರ್ ನೀಡುತ್ತಿದೆ.

ಗ್ರಾಮದಲ್ಲಿ ಕೇವಲ 1 ಯೂರೋ (ಸುಮಾರು 90 ರೂ.) ಗೆ ಮನೆ ಒದಗಿಸಲಾಗುವುದು ಎಂದು ಮಧ್ಯ ಸಾರ್ಡಿನಿಯಾದಲ್ಲಿರುವ ಒಲೊಲೈ ಗ್ರಾಮವು ಘೋಷಿಸಿದೆ. ಗ್ರಾಮದ ಮೇಯರ್ ಫ್ರಾನ್ಸೆಸ್ಕೊ ಕೊಲಂಬೊ ಈ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. ಈ ಗ್ರಾಮವು ತನ್ನ ವೆಬ್‌ಸೈಟ್‌ನಲ್ಲಿ “ಜಾಗತಿಕ ರಾಜಕೀಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?” ಎಂದು ಕೇಳುವ ಹೇಳಿಕೆಯನ್ನು ನೀಡಿದೆ. ಇಲ್ಲಿ ಪಾಳುಬಿದ್ದ ಮನೆಗಳು ಕೇವಲ ಒಂದು ಯೂರೋಗೆ (ಸುಮಾರು Rs 90), ಮತ್ತು ಸಿದ್ಧ ಮನೆಗಳು $ 105,000 (ಸುಮಾರು 88 ಲಕ್ಷ) ಗೆ ಲಭ್ಯವಿವೆ ಎಂಬ ಮಾಹಿತಿ ನೀಡಿದೆ.

Edited By :
PublicNext

PublicNext

20/11/2024 04:51 pm

Cinque Terre

22.51 K

Cinque Terre

0

ಸಂಬಂಧಿತ ಸುದ್ದಿ