ಮಾಲಿ: ದೇಶದ ಗಡಿಭಾಗದಲ್ಲಿ ಸೇನಾ ನೆಲೆಗಳ ಮೇಲೆ ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕರ ಗುಂಪಿನ ಮೇಲೆ ಫ್ರಾನ್ಸ್ ಸೇನಾ ಪಡೆಗಳು ವಾಯು ದಾಳಿ ಮಾಡಿ 50ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿರುವುದು ತಿಳಿದುಬಂದಿದೆ.
ಈ ಉಗ್ರರು ಅನ್ಸಾರುಲ್ ಇಸ್ಲಾಮ್ ಎಂಬ ಸಂಘಟನೆಗೆ ಸೇರಿದವರೆನ್ನಲಾಗಿದೆ.
ಅಲ್-ಖೈದಾ ಜೊತೆಗೂ ಮೈತ್ರಿ ಹೊಂದಿದೆ. ಸ್ವತಂತ್ರ ದೇಶವಾಗುವ ಮುನ್ನ ಫ್ರಾನ್ಸ್ ನ ವಸಾಹತು ಪ್ರದೇಶವಾಗಿದ್ದ ಮಾಲಿಯಲ್ಲಿ 2012ರಿಂದಲೂ ಜಿಹಾದಿ ಸಮಸ್ಯೆ ತಲೆದೋರಿದೆ.
ಇತಂಹ ಭಯೋತ್ಪಾದಕರನ್ನು ದಮನ ಮಾಡಲು ಫ್ರಾನ್ಸ್ ನಿರಂತರ ಪ್ರಯತ್ನಿ ನಡೆಸುತ್ತಲೇ ಇದೆ.
ನೋ ಫಾಸೋ ಮತ್ತು ನೈಜರ್ ದೇಶಗಳ ಬಳಿಯ ಮಾಲಿ ಗಡಿಭಾಗದಲ್ಲಿ ಜಿಹಾದಿ ಪಡೆಗಳು ಬೀಡು ಬಿಟ್ಟಿದ್ದವು.
ಡ್ರೋನ್ ಮೂಲಕ ಸ್ಥಳಗಳ ಪರಿಶೀಲನೆ ನಡೆಸುತ್ತಿದ್ದಾಗ ಉಗ್ರರು ಅಡಗಿಕೊಳ್ಳಲು ಯತ್ನಿಸಿದರು.
ಮಿರೇಜ್ ಜೆಟ್ ಮತ್ತು ಡ್ರೋನ್ ಗಳ ಮೂಲಕ ಉಗ್ರರ ಅಡಗುದಾಣದ ಮೇಲೆ ಮಿಸೈಲ್ ದಾಳಿ ನಡೆಸಲಾಯಿತು.
ಇದರಲ್ಲಿ 50ಕ್ಕೂ ಹೆಚ್ಚು ಉಗ್ರರು ಸಂಹಾರಗೊಂಡರು. 30ಕ್ಕೂ ಹೆಚ್ಚು ಬೈಕುಗಳು ನಾಶಗೊಂಡವು.
ಸ್ಥಳದಲ್ಲಿ ಬಾಂಬ್ ಕವಚ, ಮದ್ದುಗುಂಡುಗಳು ಸಿಕ್ಕಿವೆ. ಈ ಜಿಹಾದಿಗಳು ಪ್ರಾನ್ಸ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಿದ್ದಂತಿತ್ತು ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಮಾಹಿತಿ ನೀಡಿದ್ದಾರೆ.
PublicNext
03/11/2020 03:20 pm