ಥೇಟ್ ಮನುಷ್ಯನ ಕೈ ಹೊಲುವಂತ ಮರದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಈ ಮರ ಇರೋದಾದ್ರು ಎಲ್ಲಿ ಅಂದ್ರೆ ಅದು ಕಣಿವೆ ರಾಜ್ಯದ ಪುಲ್ವಾಮಾ ಜಿಲ್ಲೆಯ ಡೋಗ್ರಿಪೊರಾದಲ್ಲಿ ಎಂದು ಪ್ರತಿಪಾದಿಸಲಾಗುತ್ತಿದೆ.
ಉತ್ತರ ಕಾಶ್ಮೀರದ ಡೋಗ್ರಿಪೊರಾದಲ್ಲಿರುವ ಮರದ ಕೆತ್ತನೆ…ಎಂದು ಫೋಟೋದೊಂದಿಗೆ ಕ್ಯಾಪ್ಷನ್ ಬರೆಯಲಾಗಿದೆ.
ಆದರೆ ಈ ಕೈ ಆಕಾರದಲ್ಲಿ ಕೆತ್ತಿರುವ ಮರ ಇರುವುದು ಕಾಶ್ಮೀರದಲ್ಲಿ ಅಲ್ಲ ಎಂಬ ವಿಷಯ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ ಚೆಕ್ನಿಂದ ಗೊತ್ತಾಗಿದೆ.
ಈ ಮರ ನಮ್ಮ ದೇಶದಲ್ಲೇ ಇಲ್ಲ…ಲಂಡನ್ ನ ವೇಲ್ಸ್ ನಲ್ಲಿರುವ ‘ದಿ ಜೈಂಟ್ ಹ್ಯಾಂಡ್ ಆಫ್ ವೈರ್ನ್ವಿ (ವೈರ್ನ್ವಿ ಸರೋವರದ ಅತಿದೊಡ್ಡ ಕೈ)’ ಎಂಬುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವನ್ನು ರಿವರ್ಸ್ ಸರ್ಚಿಂಗ್ ಗೆ ಒಳಪಡಿಸಿದಾಗ ಅದು ಲಂಡನ್ ನಲ್ಲಿ ಇರುವ ಮರ ಎಂಬ ಸತ್ಯ ಗೊತ್ತಾಗಿದೆ.
ವೈರ್ನ್ವಿ ಸರೋವರದ ದಡದಲ್ಲಿ ಕಡಿದ ಮರವನ್ನು ಕಲಾವಿದ ಸೈಮನ್ ಒ’ರೂರ್ಕೆ ಎಂಬುವರು ದೈತ್ಯ ಕೈ ಆಕಾರದಲ್ಲಿ ಕೆತ್ತನೆ ಮಾಡಿ, ಸುಂದರಗೊಳಿಸಿದ್ದಾರೆ ಎನ್ನಲಾಗಿದೆ.
PublicNext
08/10/2020 03:25 pm