ಅಪರಾಧ ಮತ್ತು ಭಯೋತ್ಪಾದನೆ ಪ್ರಮಾಣ ಹೆಚ್ಚಾಗಿರುವುದರಿಂದ ಭಾರತಕ್ಕೆ ಹೋಗುವುದು ಅಪಾಯಕಾರಿ ಎಂದು ತಮ್ಮ ದೇಶದ ಪ್ರವಾಸಿಗರಿಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂಬ ಸುದ್ದಿ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಕೆನಡಾ ದೇಶ ಭಾರತದ ಈ ರಾಜ್ಯಗಳಿಗೆ ಭೇಟಿ ನೀಡುವುದು ಅಪಾಯಕಾರಿ ಎಂಬ ಅಂಶ ತಿಳಿಸಿತ್ತು. ಆದ್ದರಿಂದ ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳು, ಗುಜರಾತ್, ದೆಹಲಿ ಸೇರಿದಂತೆ ಹಲವು ರಾಜ್ಯಗಳನ್ನು ಉದಾಹರಣೆಯಾಗಿ ಸೂಚಿಸಿತ್ತು.
ಇದೀಗ ಜಗತ್ತಿನ ದೊಡ್ಡಣ್ಣ ಎಂದೇ ಹೆಸರಾದ ಅಮೆರಿಕ ಕೂಡ ಭಾರತಕ್ಕೆ ಭೇಟಿ ನೀಡುವುದು ಅಪಾಯಕಾರಿಯಾಗಿದೆ. ಅದರಲ್ಲೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ಭೇಟಿ ನೀಡಬೇಡಿ ಎಂದು ಹೇಳಿದೆ.
ದೇಶದ ಪ್ರವಾಸಿಗರಿಗೆ ನೀಡಿದ ಎಚ್ಚರಿಕೆ ಪ್ರಮಾಣ 2ನೇ ಹಂತದ್ದಾಗಿದೆ. 4ನೇ ಹಂತದ್ದಾಗಿದ್ದರೆ ಗರಿಷ್ಠ ಅಪಾಯ ಎಂಬುದಾಗಿದೆ. ಹಿಂದಿನ ದಿನವಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡುವುದು ಮೂರನೇ ಹಂತದ ಅಪಾಯ ಎಂದು ಮುನ್ನೆಚ್ಚರಿಕೆ ನೀಡಿತ್ತು.
PublicNext
08/10/2022 02:17 pm