ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯ-ಕ್ಷೇಮಗಳ ಸೇವೆಗಳ ಪ್ರಚಾರ ವಾಹನಕ್ಕೆ ಚಾಲನೆ

ಬಾಗಲಕೋಟೆ: ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರಚಾರ ಮಾಡುವ ವಾಹನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮತ್ತು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಮಗ್ರ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿ ರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು ರಾಷ್ಟ್ರೀಯ ಆರೋಗ್ಯ ಯೋಜನೆಗಳು ಹಾಗೂ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಸೇವೆಗಳು ಪಡೆಯಬಹುದಾಗಿದೆ ಎಂದರು.

ಅಲ್ಲದೇ ಅಸಾಂಕ್ರಾಮಿಕ ರೋಗಗಳು (ಮಧುಮೇಹ ಹೆಚ್ಚು ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶ ಕಾಯಿಲೆ ಕೀಲು ನೋವು ಮತ್ತು ಸಂಧಿವಾತ, ಕ್ಯಾನ್ಸರ್-ಬಾಯಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಗಳ ಸ್ಟ್ರೀಮಿಂಗ್ ಸೇವೆಗಳು), ಮೂಲಭೂತ ನೇತ್ರ ಸೇವೆಗಳನ್ನು ಪಡೆಯಬಹುದು ಎಂದರು.

Edited By : Nirmala Aralikatti
PublicNext

PublicNext

07/10/2022 04:22 pm

Cinque Terre

18.43 K

Cinque Terre

4

ಸಂಬಂಧಿತ ಸುದ್ದಿ