ಪಾಕಿಸ್ತಾನದ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ಬಳಿಕ ಪಾಕ್ ಸೈನಿಕರಿಗೆ ಸೆರೆ ಸಿಕ್ಕರೂ ಸಹ ದಿಟ್ಟತನದಿಂದ ಅದನ್ನು ಎದುರಿಸಿ, ರಾಜತಾಂತ್ರಿಕ ಸಂಧಾನದ ಮೂಲಕ ಬಿಡುಗಡೆಯಾಗಿ ವಿಶ್ವದೆಲ್ಲೇಡೆ ತನ್ನ ಸಾಧನೆ ಮೂಲಕವೇ ಚಿರಪರಿಚಿತರಾದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಈಗ ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ಹೌದು ! ವಾಯು ಸೇನೆಯಲ್ಲಿ ಮಿಗ್ 21 ಯುದ್ದ ವಿಮಾನದ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್, ಸೋರ್ಡ್ ಆರ್ಮ್ ವಾಯುಪಡೆಯ 51ನೇ ಸ್ಕ್ವಾಡ್ರನ್ ತಂಡದ ಸದಸ್ಯರಾಗಿದ್ದರು.
2004ರಲ್ಲಿ ವಾಯುಪಡೆ ಸೇರ್ಪಡೆಗೊಂಡಿದ್ದ ಅಭಿನಂದನ್ ವರ್ಧಮಾನ್ 18 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಬಳಿಕ ಇದೀಗ ನಿವೃತ್ತಿಯಾಗಿದ್ದಾರೆ.
ಅವರ ನಿವೃತ್ತಿ ಜೀವನ ಸುಖಮಯವಾಗಿರಲೇಂದು ಅನೇಕ ಭಾರತೀಯರು ಹಾರೈಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾಧನೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.
PublicNext
01/10/2022 05:44 pm