ದೇವನಹಳ್ಳಿ: ಭಾರತದ ಬೆಂಗಳೂರು ಮತ್ತು ಆಸ್ಟ್ರೇಲಿಯಾ ನಡುವೆ ನೇರ ವಿಮಾನಯಾನ ಸೇವೆಯನ್ನು ಇದೇ ಮೊದಲ ಬಾರಿಗೆ ಕ್ವಾಂಟಾಸ್ ಏರ್ವೇಸ್ ಆರಂಭಿಸಿದೆ. ಇಂದಿನಿಂದ ವಾರದಲ್ಲಿ ನಾಲ್ಕುದಿನ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ವಿಮಾನ ಸಂಚರಿಸಲಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇದೇ ಮೊದಲ ಬಾರಿಗೆ ಸಿಡ್ನಿ ಮತ್ತು ಬೆಂಗಳೂರು ನಡುವೆ ನೇರ ವಿಮಾನಯಾನ ಆರಂಭವಾಗಿದೆ. ದಕ್ಷಿಣ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರಥಮ ನೇರ ವಿಮಾನಯಾನ ಇದಾಗಿದೆ. QF67ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಡ್ನಿಗೆ ವಾರದಲ್ಲಿ ನಾಲ್ಕು ಸಲ ಹಾರಾಟ ನಡೆಸಲಿದೆ.
ಕ್ವಾಂಟಾಸ್ ವಿಮಾನಯಾನ ಆಸ್ಟ್ರೇಲಿಯಾದ ಅತಿದೊಡ್ಡ ವಿಮಾನಯಾನ ಸಂಸ್ಥೆ. ಪ್ರಪಂಚದ ಮೂರನೇ ಹಳೆಯ ವಿಮಾನಯಾನಸಂಸ್ಥೆ ಸಹ. ಇದಕ್ಕೂ ಮುನ್ನ ಕ್ವಾಂಟಾಸ್ ಏರ್ವೇಸ್ ದೆಹಲಿ ಮತ್ತು ಮೆಲ್ಬೋರ್ನ್ ನಡುವೆ ನೇರ ವಿಮಾನಯಾನ ಸೇವೆ ಆರಂಭಿಸಿತ್ತು. ಇದೀಗ ದಕ್ಷಿಣ ಭಾರತದ ಬೆಂಗಳೂರಿಗೂ ಸೇವೆ ವಿಸ್ತರಿಸಿದೆ..
PublicNext
14/09/2022 06:17 pm