ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಧಾನಿಯಲ್ಲಿ ಸುರಿದ ಮಳೆ : ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಿಗೆ 225 ಕೋಟಿ ರೂ. ನಷ್ಟ

ಬೆಂಗಳೂರು : ಐಟಿ ಕಾರಿಡಾರ್ ಪ್ರದೇಶದಲ್ಲಿ ಸಮರ್ಪಕ ಮೂಲ ಸೌಕರ್ಯ ಒದಗಿಸದಿದ್ದಲ್ಲಿ ಐಟಿ ಕಂಪನಿಗಳು ಪರ್ಯಾಯ ಸ್ಥಳ ಹುಡುಕಿಕೊಳ್ಳಲಿವೆ ಎಂದು ಹೊರ ವರ್ತುಲ ರಸ್ತೆಗಳಲ್ಲಿರುವ ಕಂಪನಿಗಳ ಸಂಘದಿಂದ (ಒಆರ್ ಆರ್ ಸಿಎ) ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರೀಯ ರೇಷ್ಮೆ ಮಂಡಳಿ ಜಂಕ್ಷನ್ ನಿಂದ ಕೆ.ಆರ್. ಪುರ ಜಂಕ್ಷನ್ ವರೆಗಿನ 17 ಕಿ.ಮೀ ಹೊರ ವರ್ತುಲ ರಸ್ತೆಯ ಇಕ್ಕೆಲಗಳಲ್ಲಿ ಹಲವು ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಕೇಂದ್ರೀಕೃತ ಆಗಿವೆ. ಇಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಜನ ಉದ್ಯೋಗ ಮಾಡುತ್ತಿದ್ದಾರೆ. ಈ ಕಂಪನಿಗಳು ರಾಜ್ಯಕ್ಕೆ ವಾರ್ಷಿಕ 22 ಬಿಲಿಯನ್ ಡಾಲರ್ ಆದಾಯ ತಂದುಕೊಡುತ್ತಿದ್ದು, ಬೆಂಗಳೂರಿಗೆ ಶೇ.32 ತೆರಿಗೆ ಪಾವತಿಸುತ್ತಿವೆ. ಆದರೂ, ಐಟಿ ಕಾರಿಡಾರ್ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡುತ್ತಿರುವುದು ದೊಡ್ಡ ಆಘಾತವಾಗಿದೆ. ಐಟಿ ಕಂಪನಿಗಳು ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ ಎಂದು ಒಆರ್ ಸಿಸಿಎ ಎಚ್ಚರಿಕೆ ನೀಡಿದೆ.

ಹೊರ ವರ್ತುಲ ರಸ್ತೆಯ ಪ್ರದೇಶಗಳಲ್ಲಿ ಆ.30 ರಂದು ಭಾರಿ ಮಳೆಯಿಂದಾಗಿ ಸಂಭವಿಸಿದ ಪ್ರವಾಹವು ಐಟಿ ಕಂಪನಿಗಳ 225 ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ. ಈ ಐಟಿ ಕಾರಿಡಾರ್ ಪ್ರದೇಶದಲ್ಲಿ ಅತ್ಯಂತ ಕಳಪೆ ಮೂಲ ಸೌಕರ್ಯದಿಂದಾಗಿ ಎಲ್ಲ ಕಂಪನಿಗಳ ದಕ್ಷತೆ ಮತ್ತು ಉತ್ಪಾದಕತೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಕಳೆದ 3 ದಿನಗಳಿಂದ ಬಹುತೇಕ ಐಟಿ ಕಂಪನಿಗಳ ಉದ್ಯೋಗಿಗಳು ಕನಿಷ್ಠ 5 ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದಾರೆ. ಕಳಪೆ ಮೂಲ ಸೌಕರ್ಯ ಮುಂದುವರೆಸಿದಲ್ಲಿ ಜಾಗತಿಕ ಮಟ್ಟದಲ್ಲಿ ಐಟಿ ಕಂಪನಿಗಳ ಆರಂಕ್ಕೆ ಹೂಡಿಕೆ ಮಾಡಿದ ಬಂಡವಾಳವನ್ನು ಹಿಂಪಡೆಯುವ ಸಾಧ್ಯತೆಯಿದೆ ಎಂದು ಒಆರ್ ಸಿಸಿಎ ಅಧ್ಯಕ್ಷ ಮೋಹನ್ ದಾಸ್ ಪೈ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

02/09/2022 11:33 pm

Cinque Terre

79.87 K

Cinque Terre

3