ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ

ಅಥಣಿ: ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಅಥಣಿ ತಾಲೂಕಿನ ಸತ್ತಿ ಹಾಗೂ ದೊಡವಾಡ ಗ್ರಾಮಸ್ಥರು ಸತ್ತಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಕ್ಕೆ ನಿನ್ನೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಎಂಟು ದಿನಗಳಿಂದ ಈ ಗ್ರಾಮಗಳಿಗೆ ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದ್ದು, ಗ್ರಾಮಗಳಿಗೆ ಕಡ್ಡಾಯವಾಗಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವಿಷಯ ತಿಳಿದು ಅಥಣಿ ಹೆಸ್ಕಾಂ ಎಂ ವಿಜಯಕುಮಾರ ಕೋಲೆ, ಎಇಇ ಎಂ.ಎಸ್.ಅವಟಿ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ ಹಾಗೂ ಪಿಎಸ್‌ಐ ಶಿವಶಂಕರ ಮುಕರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರಾದರೂ ಪ್ರತಿಭಟನಾಕಾರರು ಪಟ್ಟು ಬಿಡಲಿಲ್ಲ.

ಹೆಸ್ಕಾಂ ಎಇ ವಿಜಯಕುಮಾರ ಕೋಲೆ ಮಾತನಾಡಿ, ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುವುದು. ವಾರದೊಳಗೆ 7 ಗಂಟೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ತಾ.ಪಂ ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಪಿಕೆಪಿಎಸ್ ಅಧ್ಯಕ್ಷ ಬಿ.ಆರ್‌.ಪಾಟೀಲ, ಬಸವರಾಜ ದಳವಾಯಿ, ಎಂ.ಎನ್.ಪಾಟೀಲ, ಹನುಮಂತ ಜಗದೇವ, ಕಾಂತು ಹುದ್ದಾರೆ, ಮುರುಗೇಶ ಐಗಳಿ, ಶಿವಾನಂದ ನಂದೇಶ್ವರ , ಶ್ರೀಶೈಲ ಚಮಕೇರಿ , ಸುರೇಶ ಬಿರಡಿ ಇದ್ದರು.

Edited By : Manjunath H D
PublicNext

PublicNext

28/08/2022 07:56 am

Cinque Terre

24.49 K

Cinque Terre

0

ಸಂಬಂಧಿತ ಸುದ್ದಿ