ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಫಾಸ್ಟ್ಯಾಗ್ ಇಲ್ಲದೆ ಟೋಲ್ ಗೇಟ್‌ನಲ್ಲಿ ಗಂಟೆಗಟ್ಟಲೆ ನಿಂತ ಸಾರಿಗೆ ಬಸ್

ಕಾರವಾರ: ಫಾಸ್ಟ್ಯಾಗ್ ಇಲ್ಲದ ಹಿನ್ನೆಲೆಯಲ್ಲಿ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಹಟ್ಟಿಕೇರಿ ಟೋಲ್‌ಗೇಟ್‌ನಲ್ಲಿ ಸಾರಿಗೆ ಬಸ್ ನಿಂತಿದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಭಾನುವಾರ ಪರದಾಡುವಂತಾಯಿತು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿಗೆ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಗದಗ, ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ ಸಾರಿಗೆ ಬಸ್‌ ಆಗಮಿಸುತ್ತಿತ್ತು. ಹಟ್ಟಿಕೇರಿ ಟೋಲ್‌ಗೇಟ್ ಬಳಿ ಬಸ್ ನಿಲ್ಲಿಸಿದಾಗ ಫಾಸ್ಟಾಗ್ ಇಲ್ಲದೇ ಟೋಲ್ ಕಟ್ಟಲು ಬಸ್ ಚಾಲಕ, ನಿರ್ವಾಹಕ ಪರದಾಡಿದರು.

ಟೋಲ್ ಕಟ್ಟಲು ಗದಗ ಡಿಪೋ ಮ್ಯಾನೇಜರ್‌ಗೆ ಸಂಪರ್ಕಿಸಿದರೆ ಮೊಬೈಲ್ ಸ್ವಿಚ್‌ಆಫ್ ಎಂದು ಬಂತು. ಹೀಗಾಗಿ ಮೇಲಾಧಿಕಾರಿ ಸೂಚನೆಯಿಲ್ಲದೇ ಟೋಲ್ ಹಣ ಕಟ್ಟಲು ಚಾಲಕ, ನಿರ್ವಾಹಕ ಹಿಂದೇಟು ಹಾಕಿದ್ದರಿಂದ ಏನು ಮಾಡಬೇಕೆಂದು ತೋಚದೆ ಪ್ರಯಾಣಿಕರು ಗಂಟೆಗಟ್ಟಲೇ ಕಾದು ಕೂರುವಂತಾಯಿತು. ಈ ವೇಳೆ ಕಾದು ಕಾದು ಬೇಸತ್ತ ಕೆಲವರು ಬಸ್ ಇಳಿದು ಬೇರೆ ವಾಹನಗಳಲ್ಲಿ ತೆರಳಿದರು. ಸಾರಿಗೆ ಇಲಾಖೆಯ ಈ ದುರವಸ್ಥೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Edited By : Nagaraj Tulugeri
PublicNext

PublicNext

21/08/2022 10:10 pm

Cinque Terre

15.29 K

Cinque Terre

0

ಸಂಬಂಧಿತ ಸುದ್ದಿ