ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಥಣಿ ತಾಲ್ಲೂಕು ಆಡಳಿತ ಮಂಡಳಿ ನಿರ್ಮಿಸಿರುವ ಚೆಕ್ ಪೋಸ್ಟ್ ಇದೀಗ ಕುಡುಕರ ಅಡ್ಡೆ

ವರದಿ : ಸಂತೋಷ ಬಡಕಂಬಿ.

ಅಥಣಿ: ಎಲ್ಲಿ‌ ನೋಡಿದರೂ ಅಲ್ಲಿ ಮದ್ಯ ಬಾಟಲಿ‌, ಕುರುಕಲು ತಿಂಡಿಗಳು ಪಾಕೆಟ್ಟುಗಳು, ನೀರು ಹಾಗೂ ತಂಪು‌ಪಾನೀಯ ಬಾಟಲಿಗಳು, ಚಿಕನ್ ಪೀಸ್‌ಗಳು ಜೊತೆಗೆ ಕುಡಿಯಲು ಬಳಸಿದ ಪ್ಲಾಸ್ಟಿಕ್ ಗ್ಲಾಸ್‌ಗಳು.

ಇವು ಕಂಡು‌ ಬಂದಿದ್ದು ಎಲ್ಲಿ ಅಂತೀರಾ ?... ಇದೇ ಅಥಣಿ ತಾಲ್ಲೂಕು ಆಡಳಿತ ಕೊರೋಣ ಸಮಯದಲ್ಲಿ ಕಾಗವಾಡ ಮತಕ್ಷೇತ್ರದ ಖೀಳೆಗಾಂವ ಗ್ರಾಮದಲ್ಲಿ ನಿರ್ಮಿಸಿಲಾಗಿರುವ ಚೆಕ್ ಪೋಸ್ಟ್ ನಲ್ಲಿ. ಇದೀಗ ಈ ಚೆಕ್ ಪೋಸ್ಟ ಕೀಡಗೇಡಿಗಳು ಸಾರಾಯಿ ಕುಡಿಯಲು ಧೂಮ್ರಪಾನ ಮಾಡಲು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸುತ್ತಮುತ್ತಲು ಇರುವ ವೈನ್ ಶಾಪ್ ದಿಂದ ಮದ್ಯವನ್ನು ತಂದು ಪ್ರಶಾಂತವಾದ ಈ ಸ್ಥಳದಲ್ಲಿ ಬಹಳ‌ ದಿನಗಳಿಂದ ಕೀಡಗೇಡಿಗಳು ಕುಡಿಯಲು ಪ್ರಾರಂಭಿಸಿದ್ದಾರೆ. ಕೆಲವು ಸಲ ಇಲ್ಲಿ‌ ಕುಡಿದು ಗಲಾಟೆ ಮಾಡಿದ್ದೂ ಸಹ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಇಷ್ಟೆಲ್ಲಾ ಘಟನೆಗಳು ಸಂಭವಿಸಿದರೂ ಇನ್ನುವರೆಗೂ ಇತ್ತ ಕಡೆ ಅಥಣಿ ತಾಲ್ಲೂಕು ಆಡಳಿತ ಗಮನ ಹರಿಸದೆ ಇರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ತಾಲ್ಲೂಕು ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಚೆಕ್ ಪೋಸ್ಟ್‌ನಲ್ಲಿ ಸಾರಾಯಿ ಕುಡಿಯುತ್ತಿರುವ ಕಿಡಿಗೇಡಿಗಳಿಗೆ ಕಡಿವಾಣ ಹಾಕ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Edited By : Shivu K
PublicNext

PublicNext

18/08/2022 01:33 pm

Cinque Terre

44.79 K

Cinque Terre

1

ಸಂಬಂಧಿತ ಸುದ್ದಿ