ಯಾದಗಿರಿ: ನೋಡ್ರಿಲ್ಲಿ.. ಮಳೆ ಬಂದ್ರೆ ಮೊಣಕಾಲುಮಟ ಹರಿಯೋ ನೀರಲ್ಲಿ ಜೀವ ಕೈಲ್ಲಿಡಿದು ಸಾರ್ವಜನಿಕರು ಒಡಾಡೋ ಪರಿಸ್ಥಿತಿ ನಿರ್ಮಾಣ ಆಗೇತಿ. ಅಂದಂಗ ಈ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ. ಹೌದು ಜನರಿಗೆ ತಮ್ಮ ತಮ್ಮ ಮನೆಗಳಿಗೆ ಹಾಗೂ ಜಮೀನುಗಳಿಗೆ ತೆರಳಲು ಕಷ್ಟಕರವಾಗಿ ಜನರು ಹೈರಾಣಾಗಿ ಹೋಗಿದ್ದಾರೆ.
ಮುಖ್ಯ ರಸ್ತೆಯ ಪಕ್ಕದಲ್ಲಿ ಒಂದು ಸಿಡಿ (ಮಿನಿ ಬ್ರಿಡ್ಜ್ ಕಮ್ ಬ್ಯಾರೇಜ್) ನಿರ್ಮಿಸಿ ಎರಡು ಬದಿಯಲ್ಲಿ ಸೈಡ್ ವಾಲ್ ಕಟ್ಟಿದರೆ ಓಡಾಡಲು ಅನುಕೂಲ ಆಗುತ್ತೆ ಅಂತಾ ಗ್ರಾಪಂ ಸದಸ್ಯ ಯಂಕಪ್ಪ ಗಂಟೆನೋರ್ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇನ್ನು ಮಳೆ ನೀರು ಜೊತೆಗೆ ಸುತ್ತಮುತ್ತಲಿನ ಭತ್ತದ ಗದ್ದೆಯು ನೀರು ಸಹ ಪೋಲಾಗುತ್ತಿದ್ದು, ಜನರು ಓಡಾಡುವ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಬೇಕಿದೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
17/08/2022 07:05 pm